ಒಟ್ಟು 34 ಕಡೆಗಳಲ್ಲಿ , 1 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತಂಗೆ ಅರವತ್ತು | ಮರೆತಂಗೆ ಮೂವತ್ತು | ಬರೆವಂಗೆ ರಾಜ್ಯ ಸರಿಪಾಲು | ಹಾರುವನು | ಬರೆಯದೇ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಅಷ್ಟದಲ ಕಮಲವನು | ಮೆಟ್ಟಿಪ್ಪ ಹಂಸ ತಾ | ಮುಟ್ಟಿಪ್ಪ ಗತಿಯನರಿಯದಾ ಯೋಗಿ ತಾ | ಕೆಟ್ಟನೆಂದರಿಗು ಸರ್ವಜ್ನ್ಯ ||
--------------
ಸರ್ವಜ್ಞ
ಆಗಲೇಳು ಸಾಸಿರವು | ಮುಗಿಲು ಮುಟ್ಟುವಕೋಟೆ | ಹಗಲೆದ್ದು ಹತ್ತು ತಲೆಯಾತ ಪರಸತಿಯ | ನೆಗೆದು ತಾ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಆಡಿ ನಳ ಕೆಟ್ಟ ಮ | ತ್ತಾಡಿ ಧರ್ಮಜ ಕೆಟ್ಟ | ಕೂಡಿದ ನಾಲ್ವರೂ ತಿರಿದುಂಡರೆ ನೆತ್ತವ | ನಾಡಬೇಡೆಂಬ ಸರ್ವಜ್ಞ ||
--------------
ಸರ್ವಜ್ಞ
ಆಡುವವ ಕೆಟ್ಟಂತೆ | ನೋಡಹೋದವ ಕೆಟ್ಟ | ಬೇದುವವ ಕೆಟ್ಟ ನೆತ್ತವನು ಆಡುವನ | ಕೂಡಿದವ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಆರಾರ ನಂಬುವಡೆ | ಆರಯ್ದು ನಂಬುವದು | ನಾರಾಯಣನಿಂದ ಬಲಿಕೆಟ್ಟ | ಮಿಕ್ಕವರ ನಾರು ನಂಬುವರು ಸರ್ವಜ್ಞ ||
--------------
ಸರ್ವಜ್ಞ
ಎಂಟೆರಡು ತಲೆಯುಳ್ಳ | ಬಂಟ ರಾವಣ ಕೆಟ್ಟ | ತುಂತ ಕೀಚಕನು ಹೊರಹೊಂಟ ಪರಸತಿಯ | ನಂಟು ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಕೆಟ್ಟರ್ ದ್ವಿಜರಿಂದ | ಕೆಟ್ಟವರು ಇನ್ನಿಲ್ಲ | ಕೆಟ್ಟುವದು ಬಿಟ್ಟು ನಡೆದರೇ ಅವರಿಂದ | ನೆಟ್ಟನವರಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಕೆಟ್ಟಹಾಲಿಂದ ಹುಳಿ | ಯಿಟ್ಟಿರ್ದ ತಿಳಿಲೇಸು | ಕೆಟ್ಟ ಹಾರುವವನ ಬದುಕಿಂದ ಹೊಲೆಯನು | ನೆಟ್ಟನೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ಕೊಟ್ಟು ಮರುಗಲು ಬೇಡ ಬಿಟ್ಟು ಹಿಡಿಯಲು ಬೇಡ | ಕೆಟ್ಟಾ ನಡೆಯುಳ ನೆರೆಬೇಡ | ಪರಸತಿಯ ಮುಟ್ಟಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ನಟ್ಟಡವಿಯಾ ಮಳೆಯು | ದುಷ್ಟರಾ ಗೆಳೆತನವು | ಕಪ್ಪೆಯಾದವಳ ತಲೆಬೇನೆ ಇವು ಮೂರು ಕೆಟ್ಟರೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ನಂಬಿಗೆಯ ಉಳ್ಳನಕ | ಕೊಂಬುವದು ಸಾಲವನು | ನಂಬಿಗೆಯ ಕೆಟ್ಟ ಬಳಿಕ ಬೆಂದಾವಿಗೆಯ | ಕುಂಭದಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಬಟ್ಟನಾಗಿಯೇ ಬೊಟ್ಟ | ನಿಟ್ಟು ಒಪ್ಪುವ ಜೈನ | ನೆಟ್ಟಗೇ ಸ್ವರ್ಗ ಪಡಿಯುವಡೆ ಸಾಣೇಕಲ್ | ಕೆಟ್ಟ ಕೇಡೇನು ಸರ್ವಜ್ಞ ||
--------------
ಸರ್ವಜ್ಞ
ಬಲವಂತ ನಾನೆಂದು | ಬಲುದು ಹೋರಲು ಬೇಡ | ಬಲವಂತ ವಾಲಿ ಶ್ರೀರಾಮನೊಡನಾಡಿ | ಛಲದಿಂದ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಬಲವಂತರಾದವರು | ಕಲಹದಿಂ ಕೆಟ್ಟಿಹರು | ಬಲವಂತ ಬಲಿಯು ದುರ್ಯೋಧನಾದಿಗಳು | ಛಲದಲುಳಿದಿಹರೆ ಸರ್ವಜ್ಞ ||
--------------
ಸರ್ವಜ್ಞ