ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಳು ಇದ್ದರೆ ಅರಸು | ಕೂಳು ಇದ್ದರೆ ಬಿರುಸು | ಆಳುಕೂಳುಗಳು ಮೇಳವಿಲ್ಲದ ಮನೆಯ | ಬಾಳುಗೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಕೂಳಿಂದ ಕುಲ ಬೆಳೆದು | ಬಾಳಿಂದ ಬಲ ಬೆಳೆದು | ಕೂಳು - ನೀರುಗಳು ಕಳೆದರ್‍ಆ ಕುಲಗಳನ್ನು | ಕೇಳಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಕೂಳು ಕುತ್ತವೆ ಕುತ್ತ ಕೂಳು ಮೇಳವೆ ಮೇಳ | ಕೂಳೊಂದುಗಳಿಗೆ ತಡೆದಿಹರೆ ಪಾತರದ ಮೇಳ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಕೂಳು ಹೋಗುವ ತನಕ | ಗೂಳಿಯಂತಿರುತಿಕ್ಕು | ಕೂಳು ಹೋಗದಾ ಮುದಿ ಬರಲು ಮನುಜನವ | ಮೂಳನಾಯಕ್ಕು ಸರ್ವಜ್ಞ ||
--------------
ಸರ್ವಜ್ಞ
ಬರಕೆ ಬುತ್ತಿಯು ಹೊಲ್ಲ | ಸಿರಿಕಾ ಮನೆ ಹೊಲ್ಲ | ಕರೆಕರೆಯ ಕೂಳು ತಿನಹೊಲ್ಲ | ಕಜ್ಜಿಯನು ಕೆರೆಕೊಳ್ಳ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ವೀಳ್ಯವಿಲ್ಲದ ಬಾಯಿ | ಕೂಳು ಇಲ್ಲದ ನಾಯಿ | ಬಾಳೆಗಳು ಇಲ್ಲದೆಲೆದೋಟ ಪಾತರದ | ಮೇಳ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ