ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಟ ರಾಗವು ಲೇಸು | ತೋಟ ಮಲ್ಲಿಗೆ ಲೇಸು | ಕೂಟವದು ಲೇಸು ಹಿರಿಯರೊಳು ಶಿವನ ಅರಿ | ದಾಟವೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ಬುದ್ಧಿವಂತರ ಕೂಟ| ವೆದ್ದು ಗಾರುವ ಹದ್ದು | ಬುದ್ಧಿಯಿಲ್ಲದವರ ನೆರೆ ಕೂಟ ಕೊರಳೊಳಗೆ | ಗುದ್ದಿಯಿದ್ದಂತೆ ಸರ್ವಜ್ಞ ||
--------------
ಸರ್ವಜ್ಞ
ಮೊಸರು ಇಲ್ಲದ ಊಟ | ಪಸರವಿಲ್ಲದ ಕಟಕ | ಹಸನವಿಲ್ಲದಳ ರತಿಕೂಟ ಜಿನನ ಬಾಯ್ | ಕಿಸುಕುಳದಂತೆ ಸರ್ವಜ್ಞ ||
--------------
ಸರ್ವಜ್ಞ