ಒಟ್ಟು 16 ಕಡೆಗಳಲ್ಲಿ , 1 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗ್ಗ ಸುಗ್ಗಿಗಳುಂಟು | ಡೊಗ್ಗೆ ಮಜ್ಜೆಗೆಯುಂಟು | ಹೆಗ್ಗುಳದ ಕಾಯಿ ಮೆಲಲುಂಟು ಮೂಢನಾ | ಡೆಗ್ಗೆನ್ನಬಹುದು ಸರ್ವಜ್ಞ ||
--------------
ಸರ್ವಜ್ಞ
ಆವ ಕಾಲವು ವನದಿ | ಜೀವಕಾಲದ ಕಳೆದು | ಜೀವಚಯದಲ್ಲಿ ದಯವಿಲ್ಲದಿರುವವನ | ಕಾಯ್ವ ಶಿವನು ಸರ್ವಜ್ಞ ||
--------------
ಸರ್ವಜ್ಞ
ಇನ್ನು ಬಲ್ಲರೆ ಕಾಯಿ | ಮುನ್ನಾರಾ ಅರವತ್ತು | ಹಣ್ಣು ಹನ್ನೆರಡು ಗೊನೆ ಮೂರು ತೊಟ್ಟೊಂದು | ಚನ್ನಾಗಿ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ
--------------
ಸರ್ವಜ್ಞ
ಒಚ್ಚೊತ್ತು ಉಂಬುವದು | ಕಿಚ್ಚತಾ ಕಾಯುವದು | ಬೆಚ್ಚನಾ ಠಾವಿಲೋಗಿದರೆ ವೈದ್ಯನಾ | ಕಿಚ್ಚಲಿಕ್ಕೆಂದ ಸರ್ವಜ್ಞ ||
--------------
ಸರ್ವಜ್ಞ
ಕಾಯಕವು ಉಳ್ಳವಕ | ನಾಯಕನು ಎನಿಸಿಪ್ಪ | ಕಾಯಕವು ತೀರ್ದ ಮರುದಿನವೆ ಸುಡುಗಾಡ | ನಾಯಕನು ಎನಿಪ ಸರ್ವಜ್ಞ ||
--------------
ಸರ್ವಜ್ಞ
ಕಾಯವಿಂದ್ರಯದಿಂದ | ಜೀವವಾಯುವಿನಿಂದ | ಮಾಯೆಯದು ಬೊಮ್ಮನಿಂದೆಂಬುವಾ ನಾಯ | ಬಾಯಿ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಪಾಪವೆನ್ನದು ಕಾಯ | ಪುಣ್ಯ ನಿನ್ನದು ರಾಯ | ಕೂಪದೊಳು ಬಿದ್ದು ಕೊರಹುತಿಹೆ ಗುರುರಾಯ | ರೂಪುಗೊಳಿಸಯ್ಯ ಸರ್ವಜ್ನ್ಯ ||
--------------
ಸರ್ವಜ್ಞ
ಬೇಡ ಕಾಯದೇ ಕೆಟ್ಟ | ಜೇಡಿ ನೇಯದೆ ಕೆಟ್ಟ | ನೋಡದಲೆ ಕೆಟ್ಟ ಕೃಷಿಕ ತಾ | ಸತಿಯ ಬಿಟ್ಟಾಡಿದವ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಮನವೆಂಬ ಮರ್ಕಟವು | ತನುವೆಂಬ ಮರನೇರಿ ತಿನುತಿಹುದು ವಿಷಯ ಫಲಗಳನು | ಕರುಣೆ ನೀ ತನುಮನ ಕಾಯೋ ಸರ್ವಜ್ನ್ಯ ||
--------------
ಸರ್ವಜ್ಞ
ಮಾಯಮೋಹವ ನಚ್ಚಿ | ಕಾಯವನು ಕರಗಿಸಿತೆ ಆಯಾಸಗೊಳುತ ಇರಬೇಡ - ಓಂ ನಮಶ್ಯಿ ವಾಯಯೆಂದನ್ನಿ ಸರ್ವಜ್ಞ
--------------
ಸರ್ವಜ್ಞ
ಮಾಯಾಮೋಹನ ಮೆಚ್ಚಿ | ಕಾಯವನು ಕರಗಿಸಿತ | ಆಯಾಸಗೊಂಡ ಬಳಲದೊನ್ನಮಃ ಶಿ | ವಾಯವೆಂದೆನ್ನು ಸರ್ವಜ್ಞ ||
--------------
ಸರ್ವಜ್ಞ
ಶ್ವಾನ ತೆಂಗಿನ ಕಾಯ | ತಾನು ಮೆಲಬಲ್ಲುದೇ ಜ್ಞಾನವಿಲ್ಲದಗೆ ಉಪದೇಶ - ವಿತ್ತಡೆ ಹಾನಿ ಕಂಡಯ್ಯ ಸರ್ವಜ್ಞ
--------------
ಸರ್ವಜ್ಞ
ಸುರೆಯ ಸೇವಿಸುವವನ | ಸುರಿಗೆಯನು ಪಿಡಿದವನ | ದೊರೆಯೊಲುಮೆಗಾಗಿ ಹಣಗುವನಕಾಯುವದು | ಸೊರಗಿಸಾಯುವವು ಸರ್ವಜ್ಞ ||
--------------
ಸರ್ವಜ್ಞ
ಸೊಣಗನಂದಣವೇರಿ | ಕುಣಿದು ಪೋಪುದು ಮಲಕೆ | ಟೊಣೆಯದೆನ್ನೊಡೆಯ ಕಾಯನ್ನ ಪಾದಕ್ಕೆ | ಮಣಿದು ಬೇಡುವೆನು ಸರ್ವಜ್ನ್ಯ ||
--------------
ಸರ್ವಜ್ಞ