ಒಟ್ಟು 8 ಕಡೆಗಳಲ್ಲಿ , 1 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಮನೆಯಲಿರುತಿಹುದು | ಕರದಲ್ಲಿ ಬರುತಿಹುದು | ಕೊರೆದು ವಂಶಜರ ತಿನುತಿಹುದು | ಕವಿಗಳಲಿ | ದೊರೆಗಳಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಇರಿದರೆಯು ಏರಿಲ್ಲ | ಹರಿದರೆಯು ಸೀಳಿಲ್ಲ ತಿರಗೊಳಕೊಂಡು ಋಣವಿಲ್ಲ ಕವಿಗಳಲಿ | ಅರಿದಿರಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಎಂಟು ಬಳ್ಳದ ನಾಮ | ಗಂಟಲಲಿ ಮುಳ್ಳುಂಟು | ಬಂಟರನು ಪಿಡಿದು ಬಡಿಸುವದು ಕವಿಗಳಲಿ | ಬಂಟರಿದಪೇಳಿ ಸರ್ವಜ್ಞ ||
--------------
ಸರ್ವಜ್ಞ
ಒಣಗಿದಾ ಮರ ಚಿಗಿತು | ಬಿಣಿಲು ಬಿಡುವುದ ಕಂಡೆ | ತಣಿಗೆಯಾ ತಾಣಕದು ಬಹುದು ಕವಿಗಳಲಿ ಗುಣಯುತರು ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಕಾಲುಂಟು ನಡೆಯದದು | ಮೂಲೆಯಲಿ ಕಟ್ಟಿಹುದು | ಬಾಲಕರ ಸೊಮ್ಮು ಹೊರತಿಹುದು ಕವಿಗಳಲಿ | ಬಾಲರಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಬಟ್ಟಲದ ಬಾಯಂತೆ | ಹುಟ್ಟುವದು ಲೋಕದೊಳು | ಮುಟ್ಟದದು ತನ್ನ ಹೆಂಡಿರನು ಕವಿಗಳಲಿ | ದಿಟ್ಟರಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಬಂದಿಹೆನು ನಾನೊಮ್ಮೆ | ಬಂದು ಹೋಗುವೆನೊಮ್ಮೆ ಬಂದೊಮ್ಮೆ ಹೋಗೆ ಬಾರೆ ನಾಂ ಕವಿಗಳಲಿ | ವಂದ್ಯರಿಗೆ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಮೂರು ಕಾಲಲಿ ನಿಂದು | ಗೀರಿ ತಿಂಬುವದು ಮರವ | ಆರಾರು ನೀರು ಕುಡಿಯುವದು ಕವಿಗಳಲಿ | ಧೀರರಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ