ಒಟ್ಟು 14 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಳೆ ಲೇಸು ಗೊಲ್ಲಂಗೆ | ಮಳೆ ಲೇಸು ಕಳ್ಳಂಗೆ | ಬಲೆ ಲೇಸು ಮೀನ ಹಿಡಿವಂಗೆ | ಕುರುಡಂಗೆ ಸುಳಿದಾಟ ಲೇಸು ಸರ್ವಜ್ಞ ||
--------------
ಸರ್ವಜ್ಞ
ಎಳ್ಳು ಗಾಣಿಗಬಲ್ಲ | ಸುಳ್ಳು ಶಿಂಪಿಗ ಬಲ್ಲ | ಕಳ್ಳರನು ಬಲ್ಲ ತಳವಾರ ಬಣಜಿಗನು | ಎಲ್ಲವನು ಬಲ್ಲ ಸರ್ವಜ್ಞ ||
--------------
ಸರ್ವಜ್ಞ
ಒಡಲನಡಗಿದ ವಿದ್ಯೆ | ನಡೆದೊಡನೆ ಬರುತಿರಲು ಒಡಹುಟ್ಟಿದವರು ಕಳ್ಳರೂ ನೃಪರೆಂದು ಪಡೆಯರದನೆಂದ | ಸರ್ವಜ್ಞ ||
--------------
ಸರ್ವಜ್ಞ
ಒಳ್ಳೆಯನು ಇರದೂರ | ಕಳ್ಳನೊಡನಾಟವು | ಸುಳ್ಳನಾ ಮಾತು ಇವು ಮೂರು ಕೆಸರೊಳಗೆ | ಮುಳ್ಳು ತುಳಿದಂತೆ ಸರ್ವಜ್ಞ ||
--------------
ಸರ್ವಜ್ಞ
ಕಷ್ಟಗಳು ಓಡಿಬರ | ಲಿಷ್ಟಕ್ಕೆ ಭಯವೇಕೆ | ಶಿಷ್ಟಂಗೆ ತೊದಲು ನುಡಿಯೇಕೆ | ಕಳ್ಳಂಗೆ ದಟ್ಟಡಿಯದೇಕೆ ಸರ್ವಜ್ಞ ||
--------------
ಸರ್ವಜ್ಞ
ಕಳ್ಳತನ-ಕಪಟಗಳು | ಸುಳ್ಳಿನಾ ಮೂಲವವು | ಕಳ್ಳ ಕೈಗಳ್ಳ ಮೈಗಳ್ಳನೊಮ್ಮೆ | ಕೊಳ್ಳಗಾಣುವನು ಸರ್ವಜ್ಞ ||
--------------
ಸರ್ವಜ್ಞ
ಕಳ್ಳನೂ ಒಳ್ಳಿದನು | ಎಲ್ಲ ಜಾತಿಯೊಳಿಹರು | ಕಳ್ಳನೊಂದೆಡೆಗೆ ಉಪಕಾರಿ ಪಂಚಾಳ | ನೆಲ್ಲರಲಿ ಕಳ್ಳ ಸರ್ವಜ್ಞ ||
--------------
ಸರ್ವಜ್ಞ
ಕಳ್ಳಿ ನಾರಿಗೆ ಹೊಲ್ಲ | ಮುಳ್ಳು ಕಾಲಿಗೆ ಹೊಲ್ಲ | ಕೊಳ್ಳಿ ಬೆಳಕಿನೊಳು ಉಣಹೊಲ್ಲ ಬಡವ ತಾ | ಸುಳ್ಳಾಡ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಕೆಂಪಿನಾ ದಾಸಾಳ | ಕೆಂಪುಂಟು ಕಂಪಿಲ್ಲ ಕೆಂಪಿನವರಲ್ಲಿ ಗುಣವಿಲ್ಲ | ಕಳ್ಳತಾ ಕೆಂಪಿರ್ದಡೇನು ಸರ್ವಜ್ಞ ||
--------------
ಸರ್ವಜ್ಞ
ಹಸಿಯ ಅಲ್ಲವು ಲೇಸು | ಬಿಳಿಯ ಪಳಿಯು ಲೇಸು ಹುಸಿ ಲೇಸು ಕಳ್ಳಹೆಣ್ಣಿಗೆ | ಬೈಗಿನಾ ಬಿಸಿಲು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಹೊಟ್ಟೆಯನು ಕಳ್ಳುವದು | ಬಟ್ಟೆಯಲಿ ಬಡಿಸುವದು ಕಟ್ಟಾಳ ಭಂಗಪಡಿಸುವದು ಗೇಣುದ್ದ | ಹೊಟ್ಟೆ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ