ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕತ್ತೆಂಗ ಕೋಡಿಲ್ಲ | ತೊತ್ತಿಗಂ ಗುಣವಿಲ್ಲ | ಹತ್ತಿಯಾ ಹೊಲಕ ಗಿಳಿಯಿಲ್ಲ ಡೊಂಬನಿಗೆ | ವೃತ್ತಿಯೇ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಕತ್ತೆಯೇರಲು ಹೊಲ್ಲ | ತೊತ್ತು ಸಂಗವು ಹೊಲ್ಲ | ಬತ್ತಲೆಯ ಜಲವ ಹೊಗಹೊಲ್ಲ ಇವುಗಳಲ್ಲಿ | ಅತ್ಯಂತ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ತೊತ್ತಿನಲಿ ಗುಣವಿಲ್ಲ | ಕತ್ತೆಗಂ ಕೋಡಿಲ್ಲ ಬತ್ತಲಿದ್ದವಗೆ ಭಯವಿಲ್ಲ ಕೊಂಡೆಯರೊಳು | ತ್ತಮರೆ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಪ್ರಸ್ತಕ್ಕಿಲ್ಲದ ಮಾತು | ಹತ್ತು ಸಾವಿರ ವ್ಯರ್ಥ | ಕತ್ತೆ ಕೂಗಿದರೆ ಫಲವುಂಟು ಬರಿಮಾತು | ಕತ್ತೆಗಿಂ ಕಷ್ಟ ಸರ್ವಜ್ಞ ||
--------------
ಸರ್ವಜ್ಞ
ಪ್ರಸ್ತಾಪಕೊದಗಿದಾ | ಕತ್ತೆ ಮದಕರಿಯಂತೆ | ಪ್ರಸ್ತಾಪತೀರ್ಥ ಮರುದಿನಾ ಮದಕರಿಯು | ಕತ್ತೆಯಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಸತ್ತಕತ್ತೆಯ ಹೊತ್ತ | ಕೆತ್ತಣದ ಹೊಲೆಯನವ | ಉತ್ತಮನು ಎಂದು ಹೆರರೊಡನೆ ಹೊತ್ತವನೆ | ನಿತ್ಯವೂ ಹೊಲೆಯ ಸರ್ವಜ್ಞ ||
--------------
ಸರ್ವಜ್ಞ
ಹುತ್ತು ಹಾವಿಗೆ ಲೇಸು | ಮುತ್ತು ಕೊರಳಿಗೆ ಲೇಸು | ಕತ್ತೆಯಾ ಹೇರುತರ ಲೇಸು | ತುಪ್ಪದಾ | ತುತ್ತು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ