ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕಿಯಿಂ ತೆಂಗು ಜಾ | ನಕಿಯಿಂದ ಲಂಕೆಯೂ | ಮೆಕ್ಕಿಯಿಂ ಕಣಕ ಕೆಡುವಂತೆ ದುರ್ಬುದ್ಧಿ | ಹೊಕ್ಕಲ್ಲಿ ಕೇಡು ಸರ್ವಜ್ಞ ||
--------------
ಸರ್ವಜ್ಞ
ಕಣಕ ನೆನೆದರೆ ಹೊಲ್ಲ | ಕುಣಿಕೆ ಹರಿದರೆ ಹೊಲ್ಲ | ಕಣ್ಣು ಕಟ್ಟು ಹೊಲ್ಲ ಅರಿದರಲಿ ಚುಕ್ಕಿಯ | ಎಣಿಸುವದೆ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಕಣಕದಾ ಕಡುಬಾಗಿ | ಮಣಕೆಮ್ಮೆ ಹಯನಾಗಿ | ಕುಣಿ ಕುಣಿದು ಕಡವ ಸತಿಯಾಗಿ ಬೆಳವಲದ ಅಣಕ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ತೆಂಕಣಕೆ ಮುಗಿಲಡರಿ | ಶಂಕರನೆ ದೆಶ ಮಿಂಚೆ | ಪಂಕಜಾರಾತ ಗುಡಿಗೆಟ್ಟ ಮಳೆಯು ತಾ | ಭೋಂಕನೇ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ಹಣತೆ ಭತ್ತವು ಅಲ್ಲ | ಅಣಬೆ ಸತ್ತಿಗೆಯಲ್ಲ | ಕಣಕದಾ ಕಲ್ಲು ಮಣಿಯಲ್ಲ ಬಣಜಿಗನು | ಗುಣವಂತನಲ್ಲ ಸರ್ವಜ್ಞ ||
--------------
ಸರ್ವಜ್ಞ