ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಷ್ಟದಳಕಮಲದಲಿ | ಕಟ್ಟಿತಿರುಗುವ ಹಂಸ | ಮೆಟ್ಟುವಾ ದಳವ ನಡುವಿರಲಿ ಇರುವದನು | ಮುಟ್ಟುವನೆ ಯೋಗಿ ಸರ್ವಜ್ನ್ಯ ||
--------------
ಸರ್ವಜ್ಞ
ಎತ್ತ ಹೋದರು ಒಂದು | ತುತ್ತು ಕಟ್ಟಿರಬೇಕು | ತುತ್ತೊಂದು ಗಳಿಗೆ ತಡೆದಿಹರೆ ಕೈ ಹಿಡಿದು | ಎತ್ತಬೇಕೆಂದ ಸರ್ವಜ್ಞ ||
--------------
ಸರ್ವಜ್ಞ
ಕಟ್ಟಿದರೆ ಸೀತಿಹರೆ | ನೆಟ್ಟನೆಯ ನಿಲಬೇಕು | ಒಟ್ಟುಯಿಸಿ ಮೀರಿ ನಡೆದಿಹರೆ ಗುರಿನೋಡಿ | ತೊಟ್ಟನೆಚ್ಚಂತೆ ಸರ್ವಜ್ಞ ||
--------------
ಸರ್ವಜ್ಞ
ಕಾಲುಂಟು ನಡೆಯದದು | ಮೂಲೆಯಲಿ ಕಟ್ಟಿಹುದು | ಬಾಲಕರ ಸೊಮ್ಮು ಹೊರತಿಹುದು ಕವಿಗಳಲಿ | ಬಾಲರಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ನಾಲಿಗೆಯ ಕಟ್ಟಿದನು | ಕಾಲನಿಗೆ ದೂರನಹ | ನಾಲಿಗೆಯು ರುಚಿಯ ಮೇಲಾಡುತಿರಲವನ | ಕಾಲ ಹತ್ತಿರವು ಸರ್ವಜ್ಞ ||
--------------
ಸರ್ವಜ್ಞ
ನುಡಿಸುವದಸತ್ಯವನು | ಕೆಡಿಸುವದು ಧರ್ಮವನು | ಹಿಡಿಸಿವದು ಕಟ್ಟಿ ಒಡಿಲ ತಾ ಲೋಭವಾ | ಹಡಣ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಮಣಿಯ ಮಾಡಿದನೊಬ್ಬ | ಹೆಣಿದು ಕಟ್ಟಿದನೊಬ್ಬ ಕುಣಿದಾಡಿ ಸತ್ತವನೊಬ್ಬ ಸಂತೆಯೊಳು | ಹೆಣನ ಮಾರಿದರು ಸರ್ವಜ್ಞ ||
--------------
ಸರ್ವಜ್ಞ
ಮೆಟ್ಟಿಪ್ಪುದಾಶೆಯನು | ಕಟ್ಟಿಪ್ಪುದಿಂದ್ರಿಯವ | ತೊಟ್ಟಿಪ್ಪುದುಳ್ಳ ಸಮತೆಯವನು ಶಿವಪದವು ಮುಟ್ಟಿಪ್ಪುದಯ್ಯ ಸರವಜ್ಞ ||
--------------
ಸರ್ವಜ್ಞ
ಸುಟ್ಟೊಲೆಯು ಬಿಡದೆ ತಾ | ನಟ್ಟ ಮೇಲುರಿದಂತೆ | ಕೊಟ್ಟಮೇಲುರಿವ ನಳಿಯನೆಂಬೀ ಮಾತು | ಕಟ್ಟಿ ಇಟ್ಟಂತೆ ಸರ್ವಜ್ಞ ||
--------------
ಸರ್ವಜ್ಞ