ಒಟ್ಟು 49 ಕಡೆಗಳಲ್ಲಿ , 1 ವಚನಕಾರರು , 45 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರೆವ ಕಲ್ಲಿನ ಮೇಲೆ ಮರ ಮೂಡಿದುದ ಕಂಡೆ | ಮರದ ಮೇಲೆರಡು ಕೈಕಂಡೆ ಚನ್ನಾಗಿ | ಇರುವುದಾ ಕಂಡೆ ಸರ್ವಜ್ಞ ||
--------------
ಸರ್ವಜ್ಞ
ಆರರಟ್ಟುಗಳಿಗಳನು | ಮೂರು ಕಂಟಕರನ್ನು | ಏರು ಜವ್ವನವ ತಡೆಯುವರೆ ಶಿವ ತಾನು | ಬೇರೆ ಇಲ್ಲೆಂದ ಸರ್ವಜ್ಞ ||
--------------
ಸರ್ವಜ್ಞ
ಆಳು ಸೂಳೆಯು ನಾಯಿ | ಕೋಳಿ ಜೋಯಿಸ ವೈದ್ಯ | ಗೂಳಿಯು ತಗರು ಪ್ರತಿರೂಪ ಕಂಡಲ್ಲಿ | ಕಾಳಗವು ಎಂದ ಸರ್ವಜ್ಞ ||
--------------
ಸರ್ವಜ್ಞ
ಉಂಡುಂಡು ಕಡೆಕಡೆದು | ಖಂಡೆಯನು ಮಸೆ ಮಸೆದು ಕಂಡವರ ಕಾಲ ಕೆದರುವಾ ದುರುಳರನು | ಗುಂಡಿಲಿಕ್ಕೆಂದ ಸರ್ವಜ್ಞ ||
--------------
ಸರ್ವಜ್ಞ
ಉಪ್ಪಿಲ್ಲದೂಟ ಕ | ಣ್ಣೊಪ್ಪವಿಲ್ಲದ ನಾರಿ | ತೊಪ್ಪಲಾ ನೀರ ಕೊನೆಗಬ್ಬು ಇವು ನಾಲ್ಕು ಸಪ್ಪೆ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಉಂಬಳಿ ಇದ್ದಂತೆ | ಕಂಬಳಿಯ ಹೊದೆವರೆ ಶಂಭುವಿದ್ದಂತೆ ಮತ್ತೊಂದು - ದೈವವ ನಂಬುವನೆಗ್ಗ ಸರ್ವಜ್ಞ
--------------
ಸರ್ವಜ್ಞ
ಎಲುವಿಲ್ಲ ನಾಲಿಗೆಗೆ | ಬಲವಿಲ್ಲ ಬಡವಂಗೆ | ತೊಲೆ ಕಂಭವಿಲ್ಲ ಗಗನಕ್ಕೆ ದೇವರಲಿ | ಕುಲಭೇದವಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಕಂಚಿಯಾ ಫಲಲೇಸು | ಮಿಂಚು ಮುಗಿಲಿಗೆ ಲೇಸು | ಕೆಚ್ಚನೆಯ ಸತಿಯು ಇರಲೇಸು ಊರಿಂಗೆ | ಪಂಚಾಳ ಲೇಸು ಸರ್ವಜ್ಞ ||
--------------
ಸರ್ವಜ್ಞ
ಕಂಡಂತೆ ಹೇಳಿದರೆ | ಕೆಂಡ ಉರಿಯುವುದು ಭೂ | ಮಂಡಲವ ಒಳಗೆ ಖಂಡಿತನಾಡುವರ | ಕಂಡಿಹುದೆ ಕಷ್ಟ ಸರ್ವಜ್ಞ ||
--------------
ಸರ್ವಜ್ಞ
ಕಂಡವರು ಕೆರಳುವರು | ಹೆಂಡತಿಯು ಕನಲುವಳು | ಖಂಡಿತದ ಲಕ್ಶ್ಮಿ ತೊಲಗುವಳು ಶಿವನೊಲುಮೆ | ಕಂಡಕೊಳ್ದಿರಕು ಸರ್ವಜ್ಞ ||
--------------
ಸರ್ವಜ್ಞ
ಕಂಡುದನು ಆಡೆ ಭೂ | ಮಂಡಲವು ಮುನಿಯುವುದು | ಕೊಂಡಾಡುತಿಚ್ಚೆ ನುಡಿದಿಹರೆ ಜಗವೆಲ್ಲ ಮುಂಡಾಡುತಿಹುದು ಸರ್ವಜ್ಞ ||
--------------
ಸರ್ವಜ್ಞ
ಕನಕ ತಾ ಕಂಕಣದ | ಜನಕನೆಂದೆನಿಸಿಹುದು | ಕ್ಷಣಿಕವದು ರೂಪವೆಂದರಿಯದಾ ಮನಜ | ಶುನಕನಲೆದಂತೆ | ಸರ್ವಜ್ಞ ||
--------------
ಸರ್ವಜ್ಞ
ಕುಲವಿಲ್ಲ ಯೋಗಿಗಂ | ಛಲವಿಲ್ಲ ಜ್ಞಾನಿಗಂ | ತೊಲೆ ಕಂಭವಿಲ್ಲ ಗಗನಕ್ಕೆ ಸ್ವರ್ಗದಲಿ | ಹೊಲಗೇರಿಯಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಕೆಂಪಿನಾ ದಾಸಾಳ | ಕೆಂಪುಂಟು ಕಂಪಿಲ್ಲ ಕೆಂಪಿನವರಲ್ಲಿ ಗುಣವಿಲ್ಲ | ಕಳ್ಳತಾ ಕೆಂಪಿರ್ದಡೇನು ಸರ್ವಜ್ಞ ||
--------------
ಸರ್ವಜ್ಞ
ಕೊಂದು ತಿನ್ನುವ ಕಂದ | ಕೊಂದನೆಂದೆನಬೇಡ | ನೊಂದಂತೆ ನೋವರಿಯದಾ ನರರಂದು | ಕೊಂದಿಹುದೆ ನಿಜವು ಸರ್ವಜ್ಞ ||
--------------
ಸರ್ವಜ್ಞ