ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಬೆಟ್ಟವನೊಬ್ಬ | ಹಾರಬಹುದೆಂದಿಹರೆ | ಹಾರಬಹುದೆಂದು ಎನಬೇಕು | ಮೂರ್ಖನಾ | ಹೋರಾಟ ಸಲ್ಲ ಸರ್ವಜ್ಞ ||
--------------
ಸರ್ವಜ್ಞ
ತತ್ವದಾ ಜ್ಞಾನತಾ | ನುತ್ತಮವು ಎನಬೇಕು | ಮತ್ತೆ ಶಿವಧ್ಯಾನ ಬೆರೆದರದು | ಶಿವಗಿರಿಂ | ದತ್ತಲೆನಬೇಕು ಸರ್ವಜ್ಞ ||
--------------
ಸರ್ವಜ್ಞ
ನೆಲವನ್ನು ಮುಗಿಲನ್ನು | ಹೊಲಿವರುಂಟೆಂದರವ | ಹೊಲಿವರು ಹೊಲಿವರು ಎನಬೇಕು | ಮೂರ್ಖನಲಿ | ಕಲಹವೇ ಬೇಡ ಸರ್ವಜ್ಞ ||
--------------
ಸರ್ವಜ್ಞ
ಬೆಟ್ಟವನು ಕೊಂಡೊಂಬ್ಬ | ನಿಟ್ಟಿಹನು ಎಂದಿಹರೆ ಇಟ್ಟಿಹನು ಎಂದು ಎನಬೇಕು ಮೂರ್ಖನಾ | ಬಟ್ಟೆ ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಮೂರು ಗಾವುದವನ್ನು ಹಾರಬಹುದೆಂದವರ | ಹಾರಬಹುದೆಂದು ಎನಬೇಕು ಮೂರ್ಖನಾ | ಹೋರಾಟ ಸಲ್ಲ ಸರ್ವಜ್ಞ ||
--------------
ಸರ್ವಜ್ಞ
ಮೊಲನಾಯ ಬೆನ್ನಟ್ಟಿ | ಗೆಲಬಹುದು ಎಂದಿಹರೆ | ಗೆಲಭುದು ಎಂದು ಎನಬೇಕು ಮೂರ್ಖನಲಿ | ಛಲವು ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಹೊಳೆಯ ನೀರೊಬ್ಬನೇ | ಅಳೆಯಬಹುದೆಂದರವ | ಅಳೆಯಬಹುದೆಂದು ಎನಬೇಕು ಮೂರ್ಖನಂ | ಗೆದೆಯಲಳವಲ್ಲ | ಸರ್ವಜ್ಞ ||
--------------
ಸರ್ವಜ್ಞ