ಒಟ್ಟು 14 ಕಡೆಗಳಲ್ಲಿ , 1 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎತ್ತ ಹೋದರು ಒಂದು | ತುತ್ತು ಕಟ್ಟಿರಬೇಕು | ತುತ್ತೊಂದು ಗಳಿಗೆ ತಡೆದಿಹರೆ ಕೈ ಹಿಡಿದು | ಎತ್ತಬೇಕೆಂದ ಸರ್ವಜ್ಞ ||
--------------
ಸರ್ವಜ್ಞ
ಎತ್ತ ಹೋದರೂ ಮನವ | ಹತ್ತಿಕೊಂಡೇ ಬಹುದು | ಮತ್ತೊಬ್ಬ ಸೆಳೆದುಕೊಳಲರಿಯದಾ | ಜ್ಞಾನದಾ | ಬಿತ್ತು ಲೇಸೆಂದು ಸರ್ವಜ್ಞ ||
--------------
ಸರ್ವಜ್ಞ
ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ ಮತ್ತೆ ಪಾದದ ಕೆರವಾಗಿ - ಗುರುವಿನ ಹತ್ತಿಲಿರು ಎಂದು ಸರ್ವಜ್ಞ
--------------
ಸರ್ವಜ್ಞ
ಎತ್ತು ಇಲ್ಲದ ಬಂಡಿ | ಒತ್ತೊತ್ತಿ ನಡಿಸುವರು | ಸುತ್ತಲೂ ರಾಜ್ಯವಾಳುವರು ಕಡೆಯಲ್ಲಿ | ಮೃತ್ಯುಹೊಂದುವರು | ಸರ್ವಜ್ಞ ||
--------------
ಸರ್ವಜ್ಞ
ಎತ್ತೆಮ್ಮೆ ಹೂಡುವದು | ಉತ್ತೊಮ್ಮೆ ಹರಗುವದು | ಬಿತ್ತೊಮ್ಮೆ ಹರಗಿ ಕಳೆತೆಗೆದರಾ ಬೆಳೆಯು | ಎತ್ತುಗೈಯುದ್ದ ಸರ್ವಜ್ಞ ||
--------------
ಸರ್ವಜ್ಞ
ಏರುವಾ ಕುದುರೆಯನು | ಹೇರುವಾ ಎತ್ತನ್ನು | ಬೇರೂರಲಿದ್ದ ಸತಿಯನ್ನು ಬೇರೋಬ್ಬ | ಸೇರದೇ ಬಿಡರು ಸರ್ವಜ್ಞ ||
--------------
ಸರ್ವಜ್ಞ
ಚಿತ್ತವಿಲ್ಲದ ಗುಡಿಯ | ಸುತ್ತಿದೊಡೆ ಫಲವೇನು ? | ಎತ್ತು ಗಾಣವನು ಹೊತ್ತು ತಾ ನಿತ್ಯದಲಿ | ಸುತ್ತಿಬಂದಂತೆ ಸರ್ವಜ್ಞ ||
--------------
ಸರ್ವಜ್ಞ
ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು | ಸುಡುವಗ್ನಿಯೊಂದೇ ಇರುತಿರೆ ಕುಲಗೋತ್ರ | ನಡುವೆ ಎತ್ತಣದು ಸರ್ವಜ್ಞ ||
--------------
ಸರ್ವಜ್ಞ
ನೆತ್ತಿಯಲೆ ಉಂಬುವದು | ಸುತ್ತಲೂ ಸುರಿಸುವದು | ಎತ್ತಿದರೆ ಎರಡು ಹೋಳಹುದು ಕವಿಗಳಿಂದ ಕುತ್ತರವ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಸತ್ತು ಹೋದರ್‍ಎ ನಿನಗೆ | ಎತ್ತಣವು ಮೋಕ್ಷವೈ ? ಸತ್ತು ಹೋಗದರೆ ಜೀವಿಸಲು ಮೋಕ್ಷದಾ | ಗೊತ್ತು ತಿಳಿಯೆಂದ ಸರ್ವಜ್ನ್ಯ ||
--------------
ಸರ್ವಜ್ಞ
ಸತ್ತುದನು ತಿಂಬಾತ | ಎತ್ತಣದ ಹೊಲೆಯನವ | ಒತ್ತಿ ಜೀವದೆ ಕೊರಳಿರಿದು ತಿಂಬಾತ | ಉತ್ತಮದ ಹೊಲೆಯ ಸರ್ವಜ್ಞ ||
--------------
ಸರ್ವಜ್ಞ
ಹರಗದ ಎತ್ತಾಗಿ | ಬರಡದ ಹಯನಾಗಿ | ಹರಟೆ ಹೊಡೆಯುವಾ ಮಗನಾಗಿ ಹೊಲದಲ್ಲಿ | ಕರಡವೇ ಬೆಳಗು ಸರ್ವಜ್ಞ ||
--------------
ಸರ್ವಜ್ಞ