ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರೆದಲೆಯು ಮೂಡಲು ಹೊರದಲೆಯು ಬಡಗಲೂ | ಸರಿಯಲೆಯು ಉದ್ದ ಪಡುವಲುಂ ತೆಂಗಣದಿ | ಬರಿದಲೆಯಲಿಹರು ಸರ್ವಜ್ಞ ||
--------------
ಸರ್ವಜ್ಞ
ಉದ್ದರಿಯ ಕೊಟ್ಟಣ್ಣ | ಹದ್ದಾದ ಹಾವಾದ | ಎದ್ದೆದ್ದು ಬರುವ ನಾಯಾದ ಮೈಲಾರ ಗೊಗ್ಗಯ್ಯನಾದ ಸರ್ವಜ್ಞ ||
--------------
ಸರ್ವಜ್ಞ
ಉದ್ದಿನಾ ಒಡೆ ಲೇಸು | ಬುದ್ಧಿಯಾ ನುಡಿ ಲೇಸು | ಬಿದ್ದೊಡನೆ ಕಯ್ಗೆ ಬರಲೇಸು ಶಿಶುವಿಂಗೆ | ಮುದ್ದಾಟ ಲೇಸು ಸರ್ವಜ್ಞ ||
--------------
ಸರ್ವಜ್ಞ
ಉದ್ದು ಮದ್ದಿಗೆ ಹೊಲ್ಲ | ನಿದ್ದೆ ಯೋಗಿಗೆ ಹೊಲ್ಲ | ಬಿದ್ದಿರಲು ಹೊಲ್ಲ ಉದ್ಯೋಗಿ ಬಡವಂಗೆ | ಗುದ್ದಾಟ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಉದ್ದುರುಟು ಮಾತಾಡಿ | ಇದುದನು ಹೋಗಾಡಿ | ಉದ್ದನಾ ಮರವ ತುದಿಗೇರಿ ತಲೆಯೂರಿ | ಬಿದ್ದು ಸತ್ತಂತೆ ಸರ್ವಜ್ಞ ||
--------------
ಸರ್ವಜ್ಞ