ಒಟ್ಟು 12 ಕಡೆಗಳಲ್ಲಿ , 1 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಶೆಯಿಲ್ಲನ ದೋಸೆ | ಮೀಸೆ ಇಲ್ಲದ ಮೋರೆ | ಬಾಸಿಂಗ ಹರಿದ ಮದುವೆಯು ಇವು ಮೂರೂ ಹೇಸಿ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಉಪ್ಪಿಲ್ಲದೂಟ ಕ | ಣ್ಣೊಪ್ಪವಿಲ್ಲದ ನಾರಿ | ತೊಪ್ಪಲಾ ನೀರ ಕೊನೆಗಬ್ಬು ಇವು ನಾಲ್ಕು ಸಪ್ಪೆ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಒಕ್ಕಲಿಕ ನೋದಲ್ಲ | ಬೆಕ್ಕು ಹೆಬ್ಬುಲಿಯಲ್ಲ | ಎಕ್ಕಿಯಾ ಗಿಡವು ಬನವೆಲ್ಲ ಇವು ಮೂರು | ಲೆಕ್ಕದೊಳಗೆಲ್ಲ ಸರ್ವಜ್ಞ ||
--------------
ಸರ್ವಜ್ಞ
ಒಕ್ಕಲಿಲ್ಲದ ಊರು | ಮಕ್ಕಳಿಲ್ಲದ ಮನೆಯು | ಲೆಕ್ಕವಿಲ್ಲದವನ ಬೇಹಾರ ಇವು ಮೂರು | ದು:ಖ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಒಳ್ಳೆಯನು ಇರದೂರ | ಕಳ್ಳನೊಡನಾಟವು | ಸುಳ್ಳನಾ ಮಾತು ಇವು ಮೂರು ಕೆಸರೊಳಗೆ | ಮುಳ್ಳು ತುಳಿದಂತೆ ಸರ್ವಜ್ಞ ||
--------------
ಸರ್ವಜ್ಞ
ಕಣ್ಣು-ನಾಲಿಗೆ-ಮನವು | ತನ್ನದೆಂದೆನಬೇಡ | ಅನ್ಯರೇ ಕೊಂದರೆನಬೇಡ ಇವು ಮೂರೂ | ತನ್ನ ಕೊಲ್ಲುವದು ಸರ್ವಜ್ಞ ||
--------------
ಸರ್ವಜ್ಞ
ಕತ್ತೆಯೇರಲು ಹೊಲ್ಲ | ತೊತ್ತು ಸಂಗವು ಹೊಲ್ಲ | ಬತ್ತಲೆಯ ಜಲವ ಹೊಗಹೊಲ್ಲ ಇವುಗಳಲ್ಲಿ | ಅತ್ಯಂತ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಗಡಿಯ ನಾಡಿನ ಸುಂಕ | ತಡೆಯಲಂಬಿಗೆ ಕೂಲಿ | ಮುಡಿಯಂಬಂತೆ ಒಳಲಂಚ ಇವು ನಾಲ್ಕು | ಅಡಿಯಿಟ್ಟದಿಲ್ಲ
--------------
ಸರ್ವಜ್ಞ
ನಟ್ಟಡವಿಯಾ ಮಳೆಯು | ದುಷ್ಟರಾ ಗೆಳೆತನವು | ಕಪ್ಪೆಯಾದವಳ ತಲೆಬೇನೆ ಇವು ಮೂರು ಕೆಟ್ಟರೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ಪುಷ್ಪ ವಿಲ್ಲದ ಪೂಜೆ | ಅಶ್ವವಿಲ್ಲದ ಅರಸು | ಒಪ್ಪಲೊಲ್ಲವಳ ನಗೆನುಡಿಯು ಇವು ಮೂರು | ಚಪ್ಪೆ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಸುಂಲಿಗನು ಹುಲಿ ಹಾವು | ಬಿಂಕದಾ ಬೆಲೆವೆಣ್ಣು | ಕಂಕಿಯೂ ಸುಂಕ - ನಸುಗುನ್ನಿ ಇವು ಏಳು | ಸೊಂಕಿದರೆ ಬಿಡವು ಸರ್ವಜ್ಞ ||
--------------
ಸರ್ವಜ್ಞ
ಹುಸಿವನ ಬೇಹಾರ | ಕಸ ಹತ್ತಿದಾರಂಬ ವಿಷಯ ಉಳ್ಳವನ ಗುರುತನ - ಇವು ಮೂರು ಮಸಿವಣ್ಣ ಕಂಡ ಸರ್ವಜ್ಞ
--------------
ಸರ್ವಜ್ಞ