ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಚಿಯಾ ಫಲಲೇಸು | ಮಿಂಚು ಮುಗಿಲಿಗೆ ಲೇಸು | ಕೆಚ್ಚನೆಯ ಸತಿಯು ಇರಲೇಸು ಊರಿಂಗೆ | ಪಂಚಾಳ ಲೇಸು ಸರ್ವಜ್ಞ ||
--------------
ಸರ್ವಜ್ಞ
ಕಾಸು ವೆಚ್ಚಕೆ ಲೇಸು | ದೋಸೆ ಹಾಲಿಗೆ ಲೇಸು | ಕೂಸಿಂಗೆ ತಾಯಿ ಇರಲೇಸು ಹರೆಯದಗೆ | ಮೀಸೆ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಗಾಜು ನೋಟಕೆ ಲೇಸು | ತೇಜಿ ಏರಲು ಲೇಸು | ರಾಜಂಗೆ ವಸ್ತ್ರ ಇರಲೇಸು ಊಟಕ್ಕೆ | ರಾಜನ್ನ ಲೇಸು ಸರ್ವಜ್ಞ ||
--------------
ಸರ್ವಜ್ಞ
ಸುಟ್ಟ ಬೆಳಸಿಯು ಲೇಸು | ಅಟ್ಟ ಬೊನವು ಲೇಸು | ಕಟ್ಟಾಣೆ ಸತಿಯು ಇರಲೇಸು ನಡುವಿಂಗೆ | ದಟ್ಟಿ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಹಡಗು ಗಾಳಿಗೆ ಲೇಸು | ಗುಡುಗು ಮಳೆ ಬರಲೇಸು | ಒಡಹುಟ್ಟಿದವರು ಇರಲೇಸು ಊರಿಂಗೆ ಬಡಿಗೆ ಲೇಸಂದ ಸರ್ವಜ್ಞ ||
--------------
ಸರ್ವಜ್ಞ
ಹರಳು ಉಂಗುರ ಲೇಸು | ಹುರುಳಿ ಕುದುರೆಗೆ ಲೇಸು | ಮರುಳ ನೆಲ ತೆಂಗು ಇರಲೇಸು | ಸ್ತ್ರೀಯರ | ಕುರುಳು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ