ಒಟ್ಟು 17 ಕಡೆಗಳಲ್ಲಿ , 1 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆಳು ಇದ್ದರೆ ಅರಸು | ಕೂಳು ಇದ್ದರೆ ಬಿರುಸು | ಆಳುಕೂಳುಗಳು ಮೇಳವಿಲ್ಲದ ಮನೆಯ | ಬಾಳುಗೇಡೆಂದ ಸರ್ವಜ್ಞ ||
ಇದ್ದಲಿಂ ಕರಿಯಿಲ್ಲ | ಬುದ್ಢಿಯಿಂ ಹಿರಿದಿಲ್ಲ | ವಿದ್ಯದಿಂದಧಿಕ ಧನವಿಲ್ಲ ದೈವತಾ | ರುದ್ರನಿಂದಿಲ್ಲ ಸರ್ವಜ್ಞ ||
ಇದ್ದಲ್ಲಿ ಸಲುವ ಹೋ | ಗಿದ್ದಲ್ಲಿಯೂ ಸಲುವ | ವಿದ್ಯೆಯನ್ನು ಬಲ್ಲ ಬಡವನಾ ಗಿರಿಯ | ಮೇಲಿರಲು ಸಲುವ ಸರ್ವಜ್ಞ ||
ಇದ್ದೂರ ಸಾಲ ಹೇ | ಗಿದ್ದರೂ ಕೊಳಬೇಡ | ಇದ್ದುದವನು ಸೆಳೆದು ಸಾಲಕೊಟ್ಟವನೊದ್ದು | ಗಿದ್ದು ಕೇಳುವನು ಸರ್ವಜ್ಞ ||
ಉದ್ದುರುಟು ಮಾತಾಡಿ | ಇದುದನು ಹೋಗಾಡಿ | ಉದ್ದನಾ ಮರವ ತುದಿಗೇರಿ ತಲೆಯೂರಿ | ಬಿದ್ದು ಸತ್ತಂತೆ ಸರ್ವಜ್ಞ ||
ಉದ್ಯೋಗವುಳ್ಳವನ | ಹೊದ್ದುವದು ಸಿರಿ ಬಂದು | ಉದ್ಯೋಗವಿಲ್ಲದಿರುವವನು ಕರದೊಳಗೆ | ಇದ್ದರೂ ಪೋಕು ಸರ್ವಜ್ಞ ||
ಉಂಬಳಿ ಇದ್ದಂತೆ | ಕಂಬಳಿಯ ಹೊದೆವರೆ ಶಂಭುವಿದ್ದಂತೆ ಮತ್ತೊಂದು - ದೈವವ ನಂಬುವನೆಗ್ಗ ಸರ್ವಜ್ಞ
ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ | ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ | ವೆಲ್ಲವರಿಗಿಲ್ಲ ಸರ್ವಜ್ಞ ||
ಕಚ್ಚಿ ಕೈಬಾಯಿಗಳು | ಇಚ್ಛೆಯಲಿ ಇದ್ದಿಹರೆ | ಅಚ್ಯುತನಪ್ಪ ಅಜನಪ್ಪ ಲೋಕದಲಿ ನಿಶ್ಚಿಂತನಪ್ಪ ಸರ್ವಜ್ಞ ||
ಕಣ್ಣು ಸಣ್ಣದು ತಾನು | ಹಣ್ಣದಿಹುದೊಂದಿಲ್ಲ | ತಣ್ಣಗಿಹ ಮನವ ನುರಿಸುವದು ಇದನು ಕೊಕೊಂ | ದಣ್ಣಗಳು ಆರು ಸರ್ವಜ್ಞ ||
ಕಿರಿಯಂದಿನಾ ಪಾಪ | ನೆರೆ ಬಂದು ಹೋದೀತೆ | ಅರವಿಂಗೆ ಹಿರಿದು ಕಿರಿದಿಲ್ಲ ಇದನು ನೀ | ನರಿದು ನೋಡೆಂದ ಸರ್ವಜ್ಞ ||
ಮದ್ಯಪಾನವ ಮಾಡಿ | ಇದ್ದುದೆಲ್ಲವ ನೀಡಿ | ಬಿದ್ದು ಬರುವವನ ಸದ್ದಡಗಿ ಸಂತಾನ | ವೆದ್ದು ಹೋಗುವದು ಸರ್ವಜ್ಞ ||
ಮನೆಯೇನು ವನವೇನು | ನೆನಹು ಇದ್ದರೆ ಸಾಕು | ಮನಮುಟ್ಟಿ ಶಿವನ ನೆನೆಯದವನು ಬೆಟ್ಟದಾ | ಕೊನೆಯಿಲ್ಲಿದ್ದೇನು ಸರ್ವಜ್ಞ ||
ರುದ್ರಕರ್ತನು ತಾನು | ಅರ್ಧನಾರಿಯು ಆದ ಇದ್ದವರೊಳಾರು ಸತಿಯರಾ ಹೃದಯವನು | ಗೆದ್ದವನು ಆರು ಸರ್ವಜ್ಞ ||
ಹೃದಯದಲ್ಲಿ ಕತ್ತರಿಯು | ತುದಿಯ ನಾಲಿಗೆ ಬೆಲ್ಲ ! ಕುದಿದು ಹೋಗುಹೆನು ಎನ್ನೊಡೆಯ ಇದ ನೋಡಿ | ಒದೆದು ಬಿಡ ಬೇಡ ಸರ್ವಜ್ನ್ಯ ||