ಒಟ್ಟು 233 ಕಡೆಗಳಲ್ಲಿ , 1 ವಚನಕಾರರು , 183 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನ ಭಂಗವಾದಂದು | ಘನನಿದ್ರೆ ಹೋದಂದು | ವನಿತೆಯರು ಸುತರು ಜರಿದಂದು ಮರಣವೇ | ತನಗೆ ಬಂತೆಂದ ಸರ್ವಜ್ಞ ||
--------------
ಸರ್ವಜ್ಞ
ಮರನೊತ್ತಿಬೇಯುವದು | ಉರಿತಾಕಿ ಬೇಯದದು ? ಪುರಗಳ ನುಂಗಿ ಬೆಳಗುವದು ಲೋಕದಲಿ | ನರನಿದೇನೆಂಬೆ ಸರ್ವಜ್ಞ ||
--------------
ಸರ್ವಜ್ಞ
ಮರೆದೊಮ್ಮೆ ನಡೆವುತ್ತ | ಸರಕನೇ ಸೀತಿಹರೆ | ಅರಿದವರಡಿಯಿಡದೆ ನಿಲ್ಲುವುದು ಇಲ್ಲದಿರೆ ಇರಿದುಕೊಂಡಂತೆ ಸರ್ವಜ್ಞ ||
--------------
ಸರ್ವಜ್ಞ
ಮಾತಿನಿಂ ನಗೆ-ನುಡಿಯು | ಮಾತಿನಿಂ ಹಗೆ ಕೊಲೆಯು | ಮಾತಿನಿಂ ಸರ್ವ ಸಂಪದವು ಲೋಕಕ್ಕೆ | ಮಾತೆ ಮಾಣಿಕವು ಸರ್ವಜ್ಞ ||
--------------
ಸರ್ವಜ್ಞ
ಮಾತು ಮಾತಿಗೆ ತಕ್ಕ | ಮಾತು ಕೋಟಿಗಳುಂಟು | ಮಾತಾಡಿ ಮನಕೆ ಮುನಿಸಕ್ಕು ಮಾತಿನಲಿ | ಸೋತವನೆ ಜಾಣ ಸರ್ವಜ್ಞ ||
--------------
ಸರ್ವಜ್ಞ
ಮಾತೆಯಿಂ ಹಿತರಿಲ್ಲಿ | ಕೋತಿಯಿಂ ಮರಳಿಲ್ಲ | ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ | ಜಾತನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಮಾಯಮೋಹವ ನಚ್ಚಿ | ಕಾಯವನು ಕರಗಿಸಿತೆ ಆಯಾಸಗೊಳುತ ಇರಬೇಡ - ಓಂ ನಮಶ್ಯಿ ವಾಯಯೆಂದನ್ನಿ ಸರ್ವಜ್ಞ
--------------
ಸರ್ವಜ್ಞ
ಮಾಸನೂರ ಬಸವರಸ | ಕೊಸನಿಶನ ಕೇಳಲು ಕಾಶಿಯೀಶನೊಳು ಪಡೆದ ವರ - ವಧು ನಡುವೆ ಸೂಸಿತೆಂತಲು ಸರ್ವಜ್ಞ
--------------
ಸರ್ವಜ್ಞ
ಮೀನಕ್ಕೆ ಶನಿ ಬರಲು | ಶಾನೆ ಕಾಳಗವಕ್ಕು | ಬೇನೆ ಬಂಧಾನಗಳು ತಾವಕ್ಕು ಬರನಕ್ಕು ಲೋಕಕ್ಕೆ | ಹಾನಿಯೇ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ಮುನಿವಂಗೆ ಮುನಿಯದಿರು | ಕನೆಯದಿರು ಮನಸಿಜಾರಿಯನು ಮರೆಯದಿರು - ಶಿವನ ಕೃಪೆ ಘ್ನಕೆ ಘನವಕ್ಕು ಸರ್ವಜ್ಞ
--------------
ಸರ್ವಜ್ಞ
ಮುನಿವಂಗೆ ಮುನಿಯದಿರು | ಕ್ನಿವಂಗೆ ಕಿನಿಯದಿರು ಮನ್ಸಿಜಾರಿಯನು ಮರೆಯದಿರು ಶಿವಕೃಪೆಯ | ಘನಕೆ ಘನವಕ್ಕು ಸರ್ವಜ್ಞ ||
--------------
ಸರ್ವಜ್ಞ
ಮುನಿವರನನು ನೆನೆಯುತಿರು | ವಿನಯದಲಿ ನಡೆಯುತಿರು | ವನಿತೆಯರ್ ಬಲೆಗೆ ಸಿಲುಕದಿರು ಬಾಳಿಕೆಯ | ಮನಘನವು ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ಮುನ್ನ ಪೂರ್ವದಲಾನು | ಪನ್ನಗಧರನಾಳು ಎನ್ನಯ ಪೆಸರು ಪುಷ್ಪದತ್ತನು-ಎಂದು ಮನ್ನಿಪರು ನೋಡ ಸರ್ವಜ್ಞ
--------------
ಸರ್ವಜ್ಞ
ಮುನ್ನ ಮಾಡಿದ ಪಾಪ | ಹೊನ್ನಿನಿಂ ಪೋಪುದೇ ? ಹೊನ್ನಿನಾ ಪುಣ್ಯವದು ಬೇರೆ; ಪಾಪ ತಾ | ಮುನ್ನಿನಂತಿಹುದು ಸರ್ವಜ್ಞ ||
--------------
ಸರ್ವಜ್ಞ
ಮೂರು ಕಾಲಲಿ ನಿಂದು | ಗೀರಿ ತಿಂಬುವದು ಮರವ | ಆರಾರು ನೀರು ಕುಡಿಯುವದು ಕವಿಗಳಲಿ | ಧೀರರಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ