ಒಟ್ಟು 233 ಕಡೆಗಳಲ್ಲಿ , 1 ವಚನಕಾರರು , 183 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಡವನೊಂದೊಳು ನುಡಿಯ ನುಡಿದಿಹರೆ ನಿಲ್ಲದದು | ಕೊಡೆಯನೆಳಲಾತ ನುಡಿದಿಹರೆ ನಾಯಕನ | ನುಡಿಯಂಬರೆಲ್ಲ ಸರ್ವಜ್ಞ ||
--------------
ಸರ್ವಜ್ಞ
ಬರೆವ ಕರಣೀಕನೊಡನೆ | ಹಿರಿದು ಜಗಳವು ಬೇಡ | ಗರಗಸದ ಒಡನೆ ಮರನಾಡಿ ತನ್ನತಾ | ನಿರಿದುಕೊಂಡಂತೆ ಸರ್ವಜ್ಞ ||
--------------
ಸರ್ವಜ್ಞ
ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವದು | ಬೆಸಿ ಲಿಂಗ ಹಸುರೆಳಸದಿರ್ಪ ಹನಿಯಾರಿ ಹಸಿದು ಹೋದಂತೆ ಸರವಜ್ಞ ||
--------------
ಸರ್ವಜ್ಞ
ಬಿಂದುವ ಬಿಟ್ಟು ಹೋ | ದಂದು ಬಸುರಾದಳವ ಳಂದದಿಯಷ್ಟಾದಶ ಮಾಸ - ಉದರದಲಿ ನಿಂದು ನಾ ಬೆಳೆದೆ ಸರ್ವಜ್ಞ
--------------
ಸರ್ವಜ್ಞ
ಬೆಂಕಿಯಲಿ ದಯೆಯಿಲ್ಲ | ಮಂಕನಲಿ ಮತಿಯಿಲ್ಲ | ಶಂಖಧ್ವನಿಗೆ ಪ್ರತಿಯಿಲ್ಲ ಸ್ವರ್ಗದಿ | ಸುಂಕದೇ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಬೆಟ್ಟವನು ಕೊಂಡೊಂಬ್ಬ | ನಿಟ್ಟಿಹನು ಎಂದಿಹರೆ ಇಟ್ಟಿಹನು ಎಂದು ಎನಬೇಕು ಮೂರ್ಖನಾ | ಬಟ್ಟೆ ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಬೇಡಂಗೆ ಕೊಡೆ ಹೊಲ್ಲ | ಆಡಿಂಗಮಳೆಹೊಲ್ಲ | ಬೇಡಿ ಉಂಬುವಂಗೆ ಬರ ಹೊಲ್ಲ ದ್ವಿಜನಿಗೆ | ಕಾಡುನುಡಿ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಬ್ರಹ್ಮ ನಿರ್ಮಿಪನೆಂಬ | ದುರ್ಮತಿಯೆ ನೀಂ ಕೇಳು ಬ್ರಹ್ಮನಾ ಸತಿಗೆ ಮೂಗಿಲ್ಲ - ವಾ ಮೂಗ ನಿರ್ಮಿಸನೇಕೆ ಸರ್ವಜ್ಞ
--------------
ಸರ್ವಜ್ಞ
ಬ್ರಹ್ಮಸ್ವ ದೇವಸ್ವ | ಮಾನಿಸರು ಹೊಕ್ಕಿಹರೆ | ಹೆಮ್ಮಗನು ಸತ್ತು ತಾ ಸತ್ತು ಮನೆಯೆಲ್ಲ | ನಿರ್ಮೂಲವಕ್ಕು ಸರ್ವಜ್ಞ ||
--------------
ಸರ್ವಜ್ಞ
ಭಾಷೆಯಿಂ ಮೇಲಿಲ್ಲ | ದಾಸನಿಂ ಕೀಳಿಲ್ಲಿ | ಮೋಸದಿಂದಧಿಕ ಕೇಡಿಲ್ಲ ಪರದೈವ | ಈಶನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಭಿತ್ತಯಾ ಚಿತ್ರದಲಿ | ತತ್ವತಾ ನೆರೆದಿಹುದೆ | ಚಿತ್ರತ್ವ ತನ್ನ ನಿಜದೊಳಗ ತ್ರೈಜಾಗದ | ತತ್ವ ತಾನೆಂದ ಸರ್ವಜ್ಞ ||
--------------
ಸರ್ವಜ್ಞ
ಭೂತೇಶಗೆರಗುವನು | ಜಾತಿ ಮಾದಿಗನಲ್ಲ | ಜಾತಿಯಲಿ ಹುಟ್ಟಿ ಶಿವನಿಂಗೆ ಶರಣೆನ್ನ | ದಾತ ಮಾದಿಗರು ಸರ್ವಜ್ಞ ||
--------------
ಸರ್ವಜ್ಞ
ಮಗಳಕ್ಕ ತಂಗಿಯು | ಮಿಗೆ ಸೊಸೆಯು ನಾದಿನಿಯು | ಜಗದ ವನಿತೆಯರು ಜನನಿಯೂ ಇವರೊಳಗೆ | ಜಗಕೊಬ್ಬಳೆಸೈ ಸರ್ವಜ್ಞ ||
--------------
ಸರ್ವಜ್ಞ
ಮಗಳಕ್ಕ ತಂಗಿಯು | ಮಿಗೆ ಸೊಸೊಯು ನಾದಿನಿಯು ಜಗದ ವನಿತೆಯರು ಜನನಿ ಮಂತಾದವರು ಜಗಕೊಬ್ಬಳೈಸೆ ಸರ್ವಜ್ಞ
--------------
ಸರ್ವಜ್ಞ
ಮಂಜಿನಿಂ ಮಳೆ ಲೇಸು | ಪಂಜು ಇರುಳಲಿ ಲೇಸು | ಪಂಜರವು ಲೇಸು ಅರಗಿಳಿಗೆ ಜಾಡಂಗೆ | ಗಂಜಿ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ