ಒಟ್ಟು 106 ಕಡೆಗಳಲ್ಲಿ , 1 ವಚನಕಾರರು , 91 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಗೈಯ ಲಾಡುವದು | ಹಿಂಗುವದು ಹೊಂಗುವದು ಸಿಂಗಿಯಲಿ ಸೀಳಿ ಬಿಡುತಿಹುದು ಆ ಮಿಗದ ಸಂಗವನು ನೋಡು ಸರ್ವಜ್ಞ ||
--------------
ಸರ್ವಜ್ಞ
ಮೂರು ಕಾಲಲಿ ನಿಂದು | ಗೀರಿ ತಿಂಬುವದು ಮರವ | ಆರಾರು ನೀರು ಕುಡಿಯುವದು ಕವಿಗಳಲಿ | ಧೀರರಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಯೋಗವನು ಮನಮುಟ್ಟಿ | ಭೋಗವನು ತೊರೆದಿಹರೆ | ಮಾಗಿಯ ಮಳೆಯು ಸುರಿದಂತೆ ಆ ಯೋಗ | ಸಾಗುತ್ತಲಿಹುದು ಸರ್ವಜ್ನ್ಯ ||
--------------
ಸರ್ವಜ್ಞ
ರಂಧ್ರ - ಗತಿ - ಆದಿತ್ಯ | ನೊಂದಾಗಿ ಅರ್ಥಿಸುತ | ಅಂದಿನಾ ತಿಥಿಯನೊಡಗೂಡೆ ನಕ್ಷತ್ರ | ಮುಂದೆ ಬಂದಕ್ಕು ಸರ್ವಜ್ಞ ||
--------------
ಸರ್ವಜ್ಞ
ರಾಗ ಯೋಗಿಗೆ ಹೊಲ್ಲ | ಭೋಗ ರೋಗಿಗೆ ಹೊಲ್ಲ | ಓಗರವು ಎಣ್ಣೆ - ಉಣಹೊಲ್ಲ ಪರನಿಂದೆ | ಆಗಲುಂ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ರಾಮನಾಮವೆ ನಾಮ | ಸೋಮ ಶಂಕರ ಗುರುವು ಆ ಮಹಾರುದ್ರ ಅಧಿದೈವ ಜಗದೊಳಗೆ | ಭೀಮನೇ ಭಕ್ತ ಸರ್ವಜ್ಞ ||
--------------
ಸರ್ವಜ್ಞ
ರುದ್ರಕರ್ತನು ತಾನು | ಅರ್ಧನಾರಿಯು ಆದ ಇದ್ದವರೊಳಾರು ಸತಿಯರಾ ಹೃದಯವನು | ಗೆದ್ದವನು ಆರು ಸರ್ವಜ್ಞ ||
--------------
ಸರ್ವಜ್ಞ
ವಿದ್ಯೆಯೇ ತಾಯ್ತಂದೆ | ಬುದ್ಧಿಯೇ ಸೋದರನು | ಆಭ್ವಾನ ಕಾದರವ ನೆಂಟ ಸುಖದಿ ತಾ | ನಿದ್ದುದೇ ರಾಜ್ಯ ಸರ್ವಜ್ಞ ||
--------------
ಸರ್ವಜ್ಞ
ವಿಷಯಕ್ಕೆ ಕುದಿಯದಿರು | ಆಶನಕ್ಕೆ ಹದೆಯದಿರು ಅಸಮಾಕ್ಷನಡಿಯನಗಲದಿರು - ಗುರುಕರುಣ ವಶವರ್ತಿಯಹುದು ಸರ್ವಜ್ಞ
--------------
ಸರ್ವಜ್ಞ
ಸಂತೆ ಸಾಲಕೆ ಹೊಲ್ಲ | ಕೊಂತ ಡೊಂಕಲು ಹೊಲ್ಲ | ಬೊಂತೆ ಹಚ್ಚಡವ ಹೊದೆ ಹೊಲ್ಲ ಆಗಲುಂ | ಚಿಂತೆಯೇ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಸುಡುವಗ್ನಿಯನು ತಂದು | ಅಡಿಗೆ ಮಾಡಿದ ಮೇಲೆ | ಒಡನುಣ್ಣದಾಗದಿಂತೆಂಬ ಮನುಜರ್‍ಆ | ಒಡನಾಟವೇಕೆ ಸರ್ವಜ್ಞ ||
--------------
ಸರ್ವಜ್ಞ
ಸೊಡರು ಸುಲಿಗೆಯ ಆಳು | ಪಡೆದುಂಬೆ ಸೂಳೆಯೂ | ತುಡುಗುಣಿಯ | ನಾಯಿ ಅಳಿಯನೂ
--------------
ಸರ್ವಜ್ಞ
ಹರಳು ಹಾದಿಗೆ ಹೊಲ್ಲ | ಮರುಳ ಮನೆಯೊಳು ಹೊಲ್ಲ | ಇರುಳೊಳು ಪಯಣ ಬರಹೊಲ್ಲ ಆಗದರಲಿ | ಸರಸವೇ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಹರಿಬ್ರಹ್ಮರೆಂಬವರು | ಹರನಿಂದಲಾದವರು ಅರಸಿಂಗೆ ಆಳು ಸರಿಯಹನೆ - ಪಶುಪತಿಗೆ ಸರಿ ಯಾರ ಕಾಣೆ ಸರ್ವಜ್ಞ
--------------
ಸರ್ವಜ್ಞ
ಹಾರುವನು ಉಪಕಾರಿ | ಹಾರುವನು ಅಪಕಾರಿ | ಹಾರುವನು ತೋರ್ಪ ಬಹುದಾರಿ ಮುನಿದರ್‍ಆ | ಹಾರುವನೆ ಮಾರಿ ಸರ್ವಜ್ಞ ||
--------------
ಸರ್ವಜ್ಞ