ಒಟ್ಟು 211 ಕಡೆಗಳಲ್ಲಿ , 1 ವಚನಕಾರರು , 143 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ವರ ಬನ್ದ ಮನುಜಂಗೆ | ನೊರೆವಾಲು ವಿಷಕ್ಕು | ನರಕದಲಿ ಬೀಳ್ವ ಅಧಮಂಗ ಶಿವಭಕ್ತಿ | ಹಿರಿದು ವಿಷಪಕ್ಕು ಸರ್ವಜ್ಞ ||
--------------
ಸರ್ವಜ್ಞ
ತಂದೆ ಹಾರುವನಲ್ಲ | ತಾಯಿ ಮಾಳಿಯು ಅಲ್ಲ ಚಂದ್ರಶೇಖರನ ವರಪುತ್ರ - ನಾ ನಿಮ್ಮ ಕಂದನಲ್ಲೆಂಬೆ ಸರ್ವಜ್ಞ
--------------
ಸರ್ವಜ್ಞ
ತಂದೆ-ತಾಯಿಗಳ ಘನ | ದಿಂದ ವಂದಿಸುವಂಗೆ | ಬಂದ ಕುತುಗಳು ಬಯಲಾಗಿ ಸ್ವರ್ಗವದು | ಮುಂದೆ ಬಂದಕ್ಕು ಸರ್ವಜ್ಞ ||
--------------
ಸರ್ವಜ್ಞ
ತವಕದಾತುರದವಳ | ನವರತಿಯು ಒದಗಿದಳ | ಸವಿಮಾತ ಸೊಬಗು ಸುರಿಯುವಾ ಯುತಿಯನು | ಅವುಕದವರಾರು ಸರ್ವಜ್ಞ ||
--------------
ಸರ್ವಜ್ಞ
ತಾಪದ ಸಂಸಾರ | ಕೊಪದಲಿ ಬಿಳ್ದವರು ಆಪತ್ತನುಳಿದು ಪೊರಮಡಲು - ಗುರುಪಾದ ಸೋಪಾನ ಕಂಡು ಸರ್ವಜ್ಞ
--------------
ಸರ್ವಜ್ಞ
ತಿಟ್ಟಿಯೊಳು ತೆವರದೊಳು | ಹುಟ್ಟಿಹನೆ ಪರಶಿವನು | ಹುಟ್ಟು ಸಾವುಗಳು ಅವಗಿಲ್ಲ ಜಗವನ್ನು | ಬಿಟ್ಟಿಹನು ನೋಡು ಸರ್ವಜ್ಞ ||
--------------
ಸರ್ವಜ್ಞ
ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ ನಿಃಪತಿಯಾದ ಗುರುವಿನುಪದೇಶದಿಂ ತಪ್ಪದೇ ಮುಕ್ತಿ ಸರ್ವಜ್ಞ
--------------
ಸರ್ವಜ್ಞ
ತೋಟ ಬೆಳೆಯನ್ನು | ದಾಟಿ ನೋಡದವರಾರು | ಮೀಟು ಜವ್ವನದ ಸೊಬಗೆಯ ನೆರೆ ಕಂಡು | ದಾಟದವರಾರು ಸರ್ವಜ್ಞ ||
--------------
ಸರ್ವಜ್ಞ
ದರುಶನವಾರಿರಃ | ಪುರುಷರು ಮೂವರಿಂ ಪರತತ್ವದಿರವು ಬೇರೆಂದು - ತೋರಿದ ಗುರು ತಾನೆ ದೈವ ಸರ್ವಜ್ಞ
--------------
ಸರ್ವಜ್ಞ
ದಿನಪತಿಗೆ ಎಣೆಯಿಲ್ಲ | ಧನಪತಿ ಸ್ಥಿರವಲ್ಲ | ಅನುಭವಿಗೆ ಬೇರೆ ಮತವಿಲ್ಲ ಅರಿದಂಗೆ | ಮುನಿವವರೆ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ದೇವರನು ನೆನೆವಂಗ | ಭಾವಿಪುದ ಬಂದಿಹುದು | ದೇವರನು ನೆನಯದಧಮಂಗೆ ಇಹಪರದಿ | ಆಪುದೂ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ದ್ವಿಜನಿಂಗೆ ಸಾಮರ್ಥ್ಯ | ಭುಜಗಂಗೆ ಕಡುನಿದ್ರೆ | ಗಜಪತಿಗೆ ಮದವು ಅತಿಗೊಡೆ ಲೋಕದಾ | ಪ್ರಜೆಯು ಬಾಳುವರೇ ಸರ್ವಜ್ಞ ||
--------------
ಸರ್ವಜ್ಞ
ನರರ ಬೇಡುವ ದೈವ | ವರವೀಯ ಬಲ್ಲುದೇ ತಿರಿವವರನಡರಿ ತಿರಿವಂತೆ - ಅದನರೆ ಹರನನೆ ಬೇಡು ಸರ್ವಜ್ಞ
--------------
ಸರ್ವಜ್ಞ
ನರಹರಿಯ ಕೊಲುವಂದು | ಎರಳೆಯನೆಸುವಂದು ಮರಳಿ ವರಗಳನು ಕೊಡುವಂದು - ಸ್ಮರಹರೆಗೆ ಸರಿಯಾರ ಕಾಣೆ ಸರ್ವಜ್ಞ
--------------
ಸರ್ವಜ್ಞ
ನಲ್ಲೆಯನು ಒಲ್ಲೆಂಬ | ಸೊಲ್ಲು ನಾಲಿಗೆ ಹೊಲೆಯು | ಬಲ್ಲಿದನು ಶ್ರವಣ ಸನ್ಯಾಸಿ ಇವರುಗಳು | ಎಲ್ಲಿ ಉದಿಸಿಹರು ಸರ್ವಜ್ಞ ||
--------------
ಸರ್ವಜ್ಞ