ಒಟ್ಟು 1034 ಕಡೆಗಳಲ್ಲಿ , 1 ವಚನಕಾರರು , 553 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಳು ಇದ್ದರೆ ಅರಸು | ಕೂಳು ಇದ್ದರೆ ಬಿರುಸು | ಆಳುಕೂಳುಗಳು ಮೇಳವಿಲ್ಲದ ಮನೆಯ | ಬಾಳುಗೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಇತ್ತುದನು ಈಯದಗೆ | ಮೃತ್ಯು ಒಲಿಯದೆ ಬಿಡಳು | ಹತ್ತಿರ್ದಲಕ್ಶ್ಮಿತೊಲಗಲ್ಕೆ ಮುಂದವನ | ತೊತ್ತಾಗೆ ಬರುವ ಸರ್ವಜ್ಞ ||
--------------
ಸರ್ವಜ್ಞ
ಇತ್ತುದನು ಈಯದನ | ಮೃತ್ಯುವೊಯ್ಯುದೆ ಬಿಡದು ಹತ್ತಿರ್ದ ಲಕ್ಷ್ಮಿ ತೊಲಗಿ ಹುಟ್ಟುವನವನ | ತೊತ್ತಾಗಿ ಮುಂದೆ ಸರ್ವಜ್ಞ ||
--------------
ಸರ್ವಜ್ಞ
ಇದ್ದಲ್ಲಿ ಸಲುವ ಹೋ | ಗಿದ್ದಲ್ಲಿಯೂ ಸಲುವ | ವಿದ್ಯೆಯನ್ನು ಬಲ್ಲ ಬಡವನಾ ಗಿರಿಯ | ಮೇಲಿರಲು ಸಲುವ ಸರ್ವಜ್ಞ ||
--------------
ಸರ್ವಜ್ಞ
ಇಂದ್ರನಾನೆಯನೇರೆ | ಒಂದುವನು ಕೊಡಲರೆಯ ಚಂದ್ರಶೇಖರನು ಮುದಿಯೆತ್ತ - ನೇರೆ ಬೇ ಕೆಂದುದನು ಕೊಡುವ ಸರ್ವಜ್ಞ
--------------
ಸರ್ವಜ್ಞ
ಇನ್ನು ಬಲ್ಲರೆ ಕಾಯಿ | ಮುನ್ನಾರಾ ಅರವತ್ತು | ಹಣ್ಣು ಹನ್ನೆರಡು ಗೊನೆ ಮೂರು ತೊಟ್ಟೊಂದು | ಚನ್ನಾಗಿ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಇಲ್ಲದನು ಇಲ್ಲೆನಲಿ | ಕಿಲ್ಲಿಯೇ ಕಲಿಯದಲೆ | ಇಲ್ಲದಾ ಮಾಯಿ-ಊಂಟೆಂಬ ಮೂಢಾತ್ಮ | ಗೆಲ್ಲಿಯದು ಮುಕ್ತಿ ಸರ್ವಜ್ಞ ||
--------------
ಸರ್ವಜ್ಞ
ಇಲ್ಲದಾ ಮಾಯೆಯದು | ಎಲ್ಲಿಂದಲೆನಹದಲೆ | ಬಲ್ಲಿತದು ಮಾಯೆಯೆನಬೇಡ | ತಿಳಿಯಲ್ಕೆ ಎಲ್ಲಿಹುದು ? ಮಾಯೆ ಸರ್ವಜ್ಞ ||
--------------
ಸರ್ವಜ್ಞ
ಈರೈದು ತಲೆಯುಳ್ಳ | ಧೀರ ರಾವಣ ಮಡಿದ | ವೀರ ಕೀಚಕನು ಗಡೆ ಸತ್ತು ಪರಸತಿಯ | ದಾರಿ ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಈಶ ಭಕ್ತನು ಆಗಿ | ವೇಶಿಯನು ತಾ ಹೋಗೆ | ಸಲಾಗಿರ್ದ ಭೋನವನು ಹಂದಿ ತಾ ಮೂಸಿ ಹೋದಂತೆ ಸರ್ವಜ್ಞ ||
--------------
ಸರ್ವಜ್ಞ
ಉಕ್ಕುವದು ಸೊಕ್ಕುವದು | ಕೆಕ್ಕನೆ ಕಲೆಯುವದು | ರಕ್ಕಸನ ವೋಲು ಮದಿಸುವದು ಒಂದು ಸೆರೆ | ಯಕ್ಕಿಯಾ ಗುಣವು ಸರ್ವಜ್ಞ ||
--------------
ಸರ್ವಜ್ಞ
ಉಗರ ತಿದ್ದಿಸುವದದು | ಮುಗುಳುನಗೆ ನಗಿಸುವದು | ಹಗರಣದ ಮಾತ ನಡಿಸುವದು ಬೋನದಾ | ಬಗೆಯ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಉಂಡು ಕೆಂಡವ ಕಾಸಿ | ಶತಪಥ ನಡೆದು | ಉಂಡೆಡದ ಮಗ್ಗುಲಲಿ ಮಲಗೆ ವೈದ್ಯನಾ | ಭಂಡಾಟವಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಉಂಡು ನೂರಡಿ ಎಣಸಿ | ಕೆಂಡಕ್ಕೆ ಕೈ ಕಾಸಿ | ಗಂಡು ಮೇಲಾಗಿ ಮಲಗಿದನು ವೈದ್ಯನಾ | ಮಿಂಡ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಉಂಡುಂಡು ಕಡೆಕಡೆದು | ಖಂಡೆಯನು ಮಸೆ ಮಸೆದು ಕಂಡವರ ಕಾಲ ಕೆದರುವಾ ದುರುಳರನು | ಗುಂಡಿಲಿಕ್ಕೆಂದ ಸರ್ವಜ್ಞ ||
--------------
ಸರ್ವಜ್ಞ