ಒಟ್ಟು 74 ಕಡೆಗಳಲ್ಲಿ , 1 ವಚನಕಾರರು , 68 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹತ್ತು ಸಾವಿರ ಕಣ್ಣು | ನೆತ್ತಿಲಾದರು | ಬಾಲ ಹುತ್ತಿನಾ ಹುಳವ ಹಿಡಿಯುವದು ಕವಿಜನರೆ | ಮೊತ್ತವಿದನ್ಹೇಳಿ ಸರ್ವಜ್ಞ ||
--------------
ಸರ್ವಜ್ಞ
ಹಸಿವು-ತೃಷೆ-ನಿದ್ರೆಗಳು | ವಿಷಯ ಮೈಥುನ ಬಯಕೆ | ಪಶು-ಪಕ್ಷಿ ನರಗೆ ಸಮನಿರಲು ಕುಲವೆಂಬ | ಘಸಣಿಯೆತ್ತಣದು ಸರ್ವಜ್ಞ ||
--------------
ಸರ್ವಜ್ಞ
ಹಾರುವರು ಎಂಬವರು | ಹಾರುವರು ನರಕಕ್ಕೆ | ಸಾರದ ನಿಜವನರಿಯದಿರೆ ಸ್ವರ್ಗದಾ | ದಾರಿಯ ಮಾರ್ಗಹುದೆ ಸರ್ವಜ್ಞ ||
--------------
ಸರ್ವಜ್ಞ
ಹಿಂದೆ ಪಾಪವ ಮಾಡಿ | ಮುಂದೆ ಪುಣ್ಯವು ಹೇಗೆ | ಹಿಂದು - ಮುಂದರಿದು ನಡೆಯದಿರೆ ನರಕದಲಿ ಬೆಂದು ಸಾಯುವನು ಸರ್ವಜ್ಞ ||
--------------
ಸರ್ವಜ್ಞ
ಹೆಂಡತಿಗೆ ಅಂಜಿವಾ | ಗಂಡನನು ಏನೆಂಬೆ | ಹಿಂಡು ಕೋಳಿಗಳು ಮುರಿತಿಂಬ ನರಿ ನಾಯ | ಕಂಡೋಡಿದಂತೆ ಸರ್ವಜ್ಞ ||
--------------
ಸರ್ವಜ್ಞ
ಹೆರೆಗಳೆಡೆ ಉರಗನನಾ | ಗರಳ ತಾ ತಪ್ಪುವದೆ | ಪರತತ್ವಬೋಧೆಯನರಿಯದಾ ಶ್ರವಣರು | ಸಿರಿಯ ತೊರೆದರೇನು ಸರ್ವಜ್ಞ ||
--------------
ಸರ್ವಜ್ಞ
ಹೊಲಬನರಿಯದ ಗುರುವು | ತಿಳಿಯಲರಿಯದ ಶಿಷ್ಯ ನೆಲೆಯನಾರಯ್ಯದುಪದೇಶ - ವಂಧಕನು ಕಳನ ಹೊಕ್ಕಂತೆ ಸರ್ವಜ್ಞ
--------------
ಸರ್ವಜ್ಞ
ಹೊಲಬನರಿಯದ ಮಾತು | ತಲೆ ಬೇನೆ ಎನಬೇಡ | ಹೊಲಬನರಿತೊಂದ ನುಡಿದಿಹರೆ ಅದು ದಿವ್ಯ | ಫಲ ಪಕ್ವದಂತೆ ಸರ್ವಜ್ಞ ||
--------------
ಸರ್ವಜ್ಞ