ಒಟ್ಟು 2705 ಕಡೆಗಳಲ್ಲಿ , 1 ವಚನಕಾರರು , 777 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೀಳ್ಯವಿಲ್ಲದ ಬಾಯಿ | ಕೂಳು ಇಲ್ಲದ ನಾಯಿ | ಬಾಳೆಗಳು ಇಲ್ಲದೆಲೆದೋಟ ಪಾತರದ | ಮೇಳ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ವೃಷಭನೇರಲು ಗುರುವು | ವಸುಧೆಯೊಳು ಮಳೆಯಕ್ಕು | ಪಶುಸ್ತ್ರೀಯರಿಗೆ ಜಯವಕ್ಕು ಜನರೆಲ್ಲ | ಮಿಸುಯಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ವ್ಯಸನ ದೇಹ | ಮಸಣವನು ಕಾಣುವದು | ವ್ಯಸನವನು ಬಿಟ್ಟು ಹಸನಾಗಿ ದುಡಿದರೆ | ಅಶನ - ವಸನಗಳು ಸರ್ವಜ್ಞ ||
--------------
ಸರ್ವಜ್ಞ
ಶಂಖ ಹುಟ್ಟಿದ ನಾದ | ಬಿಂಕವನು ಏನೆಂಬೆ | ಶಂಕರನ ಪೂಜೆ ಮನೆ ಮನೆಗೆ ಮಿಗಿಲಾಗಿ | ತೆಂಕಲುಂಟೆಂದ ಸರ್ವಜ್ಞ ||
--------------
ಸರ್ವಜ್ಞ
ಶಿವಭಕ್ತಿಯುಳ್ಳಾತ | ಭವಮುಕ್ತನಾದಾತ | ಶಿವಭಕ್ತಿಯಿರದ ಭಕ್ತಿಂಗೆ ಎಂದೆಂದು | ಭವಮುಕ್ತಿಯಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಶೀತದಲ್ಲಿ ಹಿಮ ಹೊಲ್ಲ | ಕೀತಿರುವ ವ್ರಣ ಹೊಲ್ಲ | ಪಾತಕನ ನೆರೆಯಲಿರ ಹೊಲ್ಲ ಬಡವ ತಾ | ಕೂತಿರಲು ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಶೇಷನಿಂ ಬಲರಿಲ್ಲ | ಮೋಸದಿಂ ಕಳರೆಲ್ಲ ನೇಸರೆಂ ಜಗಕೆ ಹಿತರಿಲ್ಲ - ದೇವ ತಾ ಈಶನಿಂದಿಲ್ಲ ಸರ್ವಜ್ಞ
--------------
ಸರ್ವಜ್ಞ
ಶೇಷಿನಿಂ ಬಲರಿಲ್ಲ | ಮೋಸದಿಂ | ನೇಸರಿಂ ಜಗಕ ಹಿತರಿಲ್ಲ | ಪರದೈವ | ಈಶನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಶ್ವಾನ ತೆಂಗಿನ ಕಾಯ | ತಾನು ಮೆಲಬಲ್ಲುದೇ ಜ್ಞಾನವಿಲ್ಲದಗೆ ಉಪದೇಶ - ವಿತ್ತಡೆ ಹಾನಿ ಕಂಡಯ್ಯ ಸರ್ವಜ್ಞ
--------------
ಸರ್ವಜ್ಞ
ಷಡುದರುಶನಾದಿಗಳು | ಮೃಡ ಮಾಡಲಾದುವು ಹೊಡವಡುತೆ ನಿಗಮವರಿಸುವವು - ಅಭವನ ಗಡಣಕೇಕೆ ಯಾರು ಸರ್ವಜ್ಞ
--------------
ಸರ್ವಜ್ಞ
ಸಂಗದಿಂ ಕೆಳೆಯಿಲ್ಲ | ಬಿಂಗದಿಂ ಹೊರೆಯಿಲ್ಲ ಗಂಗೆಯಿಂದಧಿಕ ನದಿಯಿಲ್ಲ - ಪರದೈವ ಲಿಂಗದಿಂದಿಲ್ಲ ಸರ್ವಜ್ಞ
--------------
ಸರ್ವಜ್ಞ
ಸಂಗದಿಂ ಕೆಳೆಯಿಲ್ಲಿ | ಭಂಗದಿಂ ವ್ಯಥೆಯಿಲ್ಲ | ಗಂಗೆಯಿಂದಧಕ ನದಿಯಲ್ಲಿ ಪರದೈವ | ಲಿಂಗದಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸಂಚಕವನೀಯದಲೆ | ಲಂಚಕರ ಹೊಗಿಸದಲೆ | ಅಂಚಿತವನೊದರಿ ಕಳುಹಿರೆ ಅಕ್ಕಸಾಲೆ | ವಂಚಿಸಲಿಕರಿಯ ಸರ್ವಜ್ಞ ||
--------------
ಸರ್ವಜ್ಞ
ಸಣ್ಣನೆಯ ಮಳಲೊಳಗೆ | ನುಣ್ಣನೆಯ ಶಿಲೆಯೊಳಗೆ ಬಣ್ಣಿಸುತ ಬರೆದ ಪಟದೊಳಗೆ ಇರುವಾತ | ತನ್ನೂಳಗೆ ಇರುನೇ ? ಸರ್ವಜ್ಞ ||
--------------
ಸರ್ವಜ್ಞ
ಸತಿಯರಿರ್ದಡೇನು ? ಸುತರಾಗಿ ಫಲವೇನು ? | ಶತಕೋಟಿಧನವ ಗಳಿಸೇನು ? ಭಕ್ತಿಯಾ | ಸ್ಥಿತಿಯಿಲದನಕ ಸರ್ವಜ್ಞ ||
--------------
ಸರ್ವಜ್ಞ