ಒಟ್ಟು 72 ಕಡೆಗಳಲ್ಲಿ , 1 ವಚನಕಾರರು , 64 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊಬ್ಬಿನಲಿ ಕೊಬ್ಬಿದರು | ಉಬ್ಬಿ ನೀ ಬೀಳದಿರು | ಒಬ್ಬರಲಿ ಬಾಳ ಬಂದಲ್ಲಿ ಪರಸತಿಯು | ತಬ್ಬ ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ರಾಗ ಯೋಗಿಗೆ ಹೊಲ್ಲ | ಭೋಗ ರೋಗಿಗೆ ಹೊಲ್ಲ | ಓಗರವು ಎಣ್ಣೆ - ಉಣಹೊಲ್ಲ ಪರನಿಂದೆ | ಆಗಲುಂ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ಲಿಂಗದೆ ಜಗವು ಅಡಗಿಹುದು - ಲಿಂಗವನು ಹಿಂಗಿ ಪರ ಉಂಟೆ ಸರ್ವಜ್ಞ
--------------
ಸರ್ವಜ್ಞ
ಲೀಲೆಯಿಂ ಕಣ್ಣಿಲ್ಲ | ಗಾಲಿಯಿಂ ಬಟುವಿಲ್ಲ | ವಾಲಿಯಿಂದಧಿಕ ಬಲರಿಲ್ಲ ಪರದೈವ | ಶೂಲಿಯಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಶೇಷಿನಿಂ ಬಲರಿಲ್ಲ | ಮೋಸದಿಂ | ನೇಸರಿಂ ಜಗಕ ಹಿತರಿಲ್ಲ | ಪರದೈವ | ಈಶನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸಂಗದಿಂ ಕೆಳೆಯಿಲ್ಲ | ಬಿಂಗದಿಂ ಹೊರೆಯಿಲ್ಲ ಗಂಗೆಯಿಂದಧಿಕ ನದಿಯಿಲ್ಲ - ಪರದೈವ ಲಿಂಗದಿಂದಿಲ್ಲ ಸರ್ವಜ್ಞ
--------------
ಸರ್ವಜ್ಞ
ಸಂಗದಿಂ ಕೆಳೆಯಿಲ್ಲಿ | ಭಂಗದಿಂ ವ್ಯಥೆಯಿಲ್ಲ | ಗಂಗೆಯಿಂದಧಕ ನದಿಯಲ್ಲಿ ಪರದೈವ | ಲಿಂಗದಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸತ್ಯಕ್ಕೆ ಸರಿಯಿಲ್ಲ | ಚಿತ್ತಕ್ಕೆ ಸ್ಥಿರವಿಲ್ಲ | ಹಸ್ತದಿಂದಧಿಕಹಿತರಿಲ್ಲ ಪರದೈವ | ನಿತ್ಯನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸತ್ಯವೆಂಬುದು ತಾನು | ನಿತ್ಯದಲಿ ಮರೆದಿಹುದು | ಮಿಥ್ಯ ಸತ್ಯವನು ಬೆರೆದರೂ ಇಹಪರದಿ | ಸತ್ಯಕ್ಕೆ ಜಯವು ಸರ್ವಜ್ಞ ||
--------------
ಸರ್ವಜ್ಞ
ಸುರತರು ಮರನಲ್ಲ | ಸುರಭಿಯೊಂದಾವಲ್ಲ ಪರುಷ ಪಾಷಾಣದೊಳಗಲ್ಲ - ಗುರುವು ತಾ ನರರೊಳಗಲ್ಲ ಸರ್ವಜ್ಞ
--------------
ಸರ್ವಜ್ಞ
ಸುರಪ ಹಂಸನ ಶಶಿಯು | ಕರಕರದ ರಾವಣನು | ವ ಕೀಚಕಾದಿ ಬಲಯುತರು | ಕೆಟ್ಟರಲೆ ಪರಸತಿಯು ಪಿಡಿದು ಸರ್ವಜ್ಞ ||
--------------
ಸರ್ವಜ್ಞ
ಸುರುತರುವು ಸುರಧೇನು | ಸುರಮಣೆ ಸೌರಲತೆ ಪರುಷಷ್ಟತನುವು ಹರಿವ ನದಿ - ಯೆಲ್ಲವು ಪರಮನಿಂ ಜನನ ಸರ್ವಜ್ಞ
--------------
ಸರ್ವಜ್ಞ
ಸುರೆಯ ಹಿರಿದುಂಡವಗೆ | ಉರಿಯಮೇಲಾಡುವಗೆ | ಹರಿಯುವಾ ಹಾವ ಪರನಾರಿ ಪಿಡಿದಂಗೆ | ಮರಣ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಹರನಾವ ಕರೆಯದಲೆ | ಪರಿಶಿವನ ನೆನೆಯದಲೆ | ಸ್ಮರಹರನ ಕರುಣವಿಲ್ಲದೆಯೆ ಜಗದೊಳಗೆ ಇರುವದೇ ಕಷ್ಟ ಸರ್ವಜ್ಞ ||
--------------
ಸರ್ವಜ್ಞ
ಹರಭಕ್ತಿಯಿಲ್ಲದ | ಪರಮಋಷಿ ಮುಖ್ಯನೇ ಹರಭಕ್ತಿಯುಳ್ಳ ಸ್ವಪಚನಾ - ದೊಡೆಯಾತ್ ಪರಮ ಋಷಿ ತಾನೆ ಸರ್ವಜ್ಞ
--------------
ಸರ್ವಜ್ಞ