ಒಟ್ಟು 1034 ಕಡೆಗಳಲ್ಲಿ , 1 ವಚನಕಾರರು , 553 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆಂಡತಿಗೆ ಅಂಜಿವಾ | ಗಂಡನನು ಏನೆಂಬೆ | ಹಿಂಡು ಕೋಳಿಗಳು ಮುರಿತಿಂಬ ನರಿ ನಾಯ | ಕಂಡೋಡಿದಂತೆ ಸರ್ವಜ್ಞ ||
--------------
ಸರ್ವಜ್ಞ
ಹೆಣ್ಣನ್ನು ಹೊನ್ನನ್ನು | ಹಣ್ಣಾದ ಮರಗಳನ್ನು | ಕಣ್ಣಿಂದ ಕಂಡು ಮನದಲ್ಲಿ ಬಯಸದಿಹ | ಅಣ್ಣಗಳು ಯಾರು ಸರ್ವಜ್ಞ ||
--------------
ಸರ್ವಜ್ಞ
ಹೆಣ್ಣಿಗೂ ಮಣ್ಣಿಗೂ ಉಣ್ಣುದುರಿಯಲುಬೇಡ | ಹೆಣ್ಣಿನಿಂದ ಕೆಟ್ಟ ದಶಕಂಠ ಕೌರವನು | ಮಣ್ಣಿಂದ ಕೆಡನೆ ಸರ್ವಜ್ಞ ||
--------------
ಸರ್ವಜ್ಞ
ಹೆತ್ತವಳು ಮಾಳಿ ಎನ್ನ | ನೊತ್ತಿ ತೆಗೆದವಳು ಕೇಶಿ ಕತ್ತು ಬೆನ್ನ ಹಿಡಿದವಳು ಕಾಳಿ - ಮೊರಿದೊಳೆನ್ನ ಬತ್ತಲಿರಿಸಿದಳು ಸರ್ವಜ್ಞ
--------------
ಸರ್ವಜ್ಞ
ಹೇನು ಕೂರೆಗಳನ್ನು | ತಾನಾ ಜಿನಕೊಲ್ಲ | ಸ್ಥಾನ ಪಲ್ಲಟವ ಮಾಡದಡೆ ಆ ಮೇಲೆ | ಏನಾದುದರಿಯ ಸರ್ವಜ್ಞ ||
--------------
ಸರ್ವಜ್ಞ
ಹೊಟ್ಟೆಗುಣ ಕೊಟ್ಟವಗೆ | ಸಿಟ್ಟು ನೆರೆ ಬಿಟ್ಟವಗೆ | ಬಟ್ಟೆಯಾ ಮುಳ್ಳು ಸುಟ್ಟವಗೆ ಬಹು ಭವದ | ಹುಟ್ಟು ತಾನಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಹೊತ್ತಾರೆ ನೆರೆಯುವದು | ಹೊತ್ತೇರಿ ಹರಿಯುವದು | ಕತ್ತಲೆಯ ಬಣ್ಣ ಮಿಗಿಲಾಗಿ ಮಳೆಗಾಲ | ವೆತ್ತಣದಯ್ಯ ಸರ್ವಜ್ಞ ||
--------------
ಸರ್ವಜ್ಞ
ಹೊತ್ತಿಗೊದಗಿದೆ ಮಾತು ಸತ್ತವನು ಎದ್ದಂತೆ | ಹೊತ್ತಾಗಿ ನುಡಿದ ಮಾತು ಕೈಜಾರಿದಾ | ಮುತ್ತಿನಂತಿಹುದು ಸರ್ವಜ್ಞ ||
--------------
ಸರ್ವಜ್ಞ
ಹೊಲಬನರಿಯದ ಮಾತು | ತಲೆ ಬೇನೆ ಎನಬೇಡ | ಹೊಲಬನರಿತೊಂದ ನುಡಿದಿಹರೆ ಅದು ದಿವ್ಯ | ಫಲ ಪಕ್ವದಂತೆ ಸರ್ವಜ್ಞ ||
--------------
ಸರ್ವಜ್ಞ
ಹೊಲಸು ಮಾಂಸದ ಹುತ್ತ | ಎಲುವಿನ ಹಂಜರವು ಹೊಲೆ ಬಲಿದು ತನುವಿನೊಳಗಿರ್ದು - ಮತ್ತದರಿ ಕುಲವನೆಣೆಸುವರೆ ಸರ್ವಜ್ಞ
--------------
ಸರ್ವಜ್ಞ
ಹೊಲಿಗೇರಿಯಲಿ ಹುಟ್ಟಿ | ವಿಲುದನಾ ಮನೆಯಿರ್ದ | ಸತಿಧರ್ಮ ದಾನಿಯೆನಿಸದಲೆ ಹಾರುವನು | ಕುಲಕೆ ಹೋರುವನು ಸರ್ವಜ್ಞ ||
--------------
ಸರ್ವಜ್ಞ
ಹೊಲಿಯ ಮಾದಿಗರುಂಡು | ಸುಲಿದಿಟ್ಟ ತೊಗಲು ಸಲೆ | ಕುಲಜರೆಂಬವರಿಗುಣಲಾಯ್ತು | ಹೊಲೆಯರಾ | ಕುಲವಾವುದಯ್ಯ ಸರ್ವಜ್ಞ ||
--------------
ಸರ್ವಜ್ಞ
ಹೊಳೆಯ ನೀರೊಬ್ಬನೇ | ಅಳೆಯಬಹುದೆಂದರವ | ಅಳೆಯಬಹುದೆಂದು ಎನಬೇಕು ಮೂರ್ಖನಂ | ಗೆದೆಯಲಳವಲ್ಲ | ಸರ್ವಜ್ಞ ||
--------------
ಸರ್ವಜ್ಞ