ಒಟ್ಟು 128 ಕಡೆಗಳಲ್ಲಿ , 1 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಂದೆ ಭಟರೊಳು ಹೊಲ್ಲ | ನಿಂದೆಯಾ ನುಡಿ ಹೊಲ್ಲ | ಕುಂದುಗುಲದವಳ ತರ ಹೊಲ್ಲ ಉರಿಯೊಳಗೆ | ನಿಂದಿರಲು ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಹರಳು ಹಾದಿಗೆ ಹೊಲ್ಲ | ಮರುಳ ಮನೆಯೊಳು ಹೊಲ್ಲ | ಇರುಳೊಳು ಪಯಣ ಬರಹೊಲ್ಲ ಆಗದರಲಿ | ಸರಸವೇ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಹುತ್ತ ಹಿತ್ತಲು ಹೊಲ್ಲ | ಬೆತ್ತ ಭೂತಕೆ ಹೊಲ್ಲ | ಒತ್ತೆಗೊಂಬಳಿಗೆ ತುರಿ ಹೊಲ್ಲ ಒಣಕೂಳ | ತುತ್ತು ತಾ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ