ಒಟ್ಟು 52 ಕಡೆಗಳಲ್ಲಿ , 1 ವಚನಕಾರರು , 43 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡಂಗೆ ಕೊಡೆ ಹೊಲ್ಲ | ಆಡಿಂಗಮಳೆಹೊಲ್ಲ | ಬೇಡಿ ಉಂಬುವಂಗೆ ಬರ ಹೊಲ್ಲ ದ್ವಿಜನಿಗೆ | ಕಾಡುನುಡಿ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಭಂಡಿಯಾ ನಡೆಚಂದ | ಮಿಂಡಿಯಾ ನುಡಿ ಚಂದ | ಕೊಂಡಿಯನು ಚಂದ ಅರಸಿಂಗೆ ಜಾರೆಗಂ | ಮಿಂಡನೇ ಚಂದ ಸರ್ವಜ್ಞ ||
--------------
ಸರ್ವಜ್ಞ
ಮಗ್ಗಿಯಾ ಗುಣಿಸುವಾ | ಮೊಗ್ಗರದ ಜೋಯಿಸರು | ಅಗ್ಗವನು ಮಳೆಯನರಿಯದಲೆ ನುಡಿವವರ | ಹೆಗ್ಗಡೆಯಬಲ್ಲ ಸರ್ವಜ್ಞ ||
--------------
ಸರ್ವಜ್ಞ
ಮಡಿಯನುಟ್ಟವರನ್ನು | ನುಡಿಸುವರು ವಿನಯದಲಿ | ಒಡಹುಟ್ಟಿದವರು ಅರುವೆಯನು ಉಟ್ಟಿಹರೆ | ನುಡಿಸ ನಾಚುವರು ಸರ್ವಜ್ಞ ||
--------------
ಸರ್ವಜ್ಞ
ಮಾತಿನಿಂ ನಗೆ-ನುಡಿಯು | ಮಾತಿನಿಂ ಹಗೆ ಕೊಲೆಯು | ಮಾತಿನಿಂ ಸರ್ವ ಸಂಪದವು ಲೋಕಕ್ಕೆ | ಮಾತೆ ಮಾಣಿಕವು ಸರ್ವಜ್ಞ ||
--------------
ಸರ್ವಜ್ಞ
ಮೀರಿ ಬೆಳೆಯಲ್ಕೆನಗೆ | ಅರಿ ಬಣ್ಣವನುಡಿಸಿ ಮೂರು ರುಚಿದೋಳು ಶಿವ - ತನ್ನನು ತೋರದೇ ಹೋದ ಸರ್ವಜ್ಞ
--------------
ಸರ್ವಜ್ಞ
ಮೆಚ್ಚಿಸುವದೊಲಿದವರ | ಇಚ್ಛೆಯನೆ ನುಡಿಯುವದು ತುಚ್ಛದಿಂದಾರ ನುಡಿದಿಹರೆ ಅವನಿರವು | ಬಿಚ್ಚುವಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಲಿಂಗದಾ ಗುಡಿ ಲೇಸು | ಗಂಗೆಯಾ ತಡಿ ಲೇಸು | ಲಿಂಗ ಸಂಗಿಗಳ ನುಡಿ ಲೇಸು ಭಕ್ತರಾ | ಸಂಗವೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ಸತ್ಯನುಡಿದತ್ತರೂ | ಸುತನೊಬ್ಬ ಸತ್ತರೂ | ಸತ್ಯವನು ಬಿಡದ ಹರಿಶ್ಚಂದ್ರ ಜಗದೊಳು | ಸ್ತುತ್ಯನಾಗಿಹನು ಸರ್ವಜ್ಞ ||
--------------
ಸರ್ವಜ್ಞ
ಹಂದೆ ಭಟರೊಳು ಹೊಲ್ಲ | ನಿಂದೆಯಾ ನುಡಿ ಹೊಲ್ಲ | ಕುಂದುಗುಲದವಳ ತರ ಹೊಲ್ಲ ಉರಿಯೊಳಗೆ | ನಿಂದಿರಲು ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಹುಟ್ಟಿಸುವನಜನೆಂಬ | ಕಷ್ಟದ ನುಡಿ ಬೇಡ ಹುಟ್ಟಿಸುವವ ತನ್ನ ಶಿರ ಹರೆಯೆ - ಮತ್ತೊಂದು ಹುಟ್ಟಿಸಿಕೊಳನೇಕೆ ಸರ್ವಜ್ಞ
--------------
ಸರ್ವಜ್ಞ
ಹೊತ್ತಿಗೊದಗಿದೆ ಮಾತು ಸತ್ತವನು ಎದ್ದಂತೆ | ಹೊತ್ತಾಗಿ ನುಡಿದ ಮಾತು ಕೈಜಾರಿದಾ | ಮುತ್ತಿನಂತಿಹುದು ಸರ್ವಜ್ಞ ||
--------------
ಸರ್ವಜ್ಞ
ಹೊಲಬನರಿಯದ ಮಾತು | ತಲೆ ಬೇನೆ ಎನಬೇಡ | ಹೊಲಬನರಿತೊಂದ ನುಡಿದಿಹರೆ ಅದು ದಿವ್ಯ | ಫಲ ಪಕ್ವದಂತೆ ಸರ್ವಜ್ಞ ||
--------------
ಸರ್ವಜ್ಞ