ಒಟ್ಟು 38 ಕಡೆಗಳಲ್ಲಿ , 1 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಭದಿಂ ಕೌರವನು | ಲಾಭವನು ಪಡೆದಿಹನೆ ? | ನಾಭಿಯಿಂ ಕೆಳಗೆ ಎರಡೂರ ಕೊಂದಾಗ | ಲಾಭ ಬಂದಿಹುದೆ ಸರ್ವಜ್ಞ ||
--------------
ಸರ್ವಜ್ಞ
ಸಂತೆ ಸಾಲಕೆ ಹೊಲ್ಲ | ಕೊಂತ ಡೊಂಕಲು ಹೊಲ್ಲ | ಬೊಂತೆ ಹಚ್ಚಡವ ಹೊದೆ ಹೊಲ್ಲ ಆಗಲುಂ | ಚಿಂತೆಯೇ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಸತ್ಯರಿಗೆ ಧರೆಯೆಲ್ಲ | ಮಸ್ತಕವನೆರಗುವದು | ಹೆತ್ತ ತಾಯ್ಮಗನ ಕರೆವಂತೆ ಶಿವನವರನೆತ್ತಿ ಕೊಂಬುವನು ಸರ್ವಜ್ಞ ||
--------------
ಸರ್ವಜ್ಞ
ಸೊಡರು ಲಂಚವ ಕೊಂಡು | ಕೊಡುವ ದೊಪ್ಪಚಿ ಬೆಳಗ | ಪೊಡವಿಗಂ ಸೂರ್ಯ ಬೆಳಗೀವೋಲ್ಲಂಚವನು | ಹಿಡಿಯದವ ಧರ್ಮಿ ಸರ್ವಜ್ಞ ||
--------------
ಸರ್ವಜ್ಞ
ಹಣವಿಗೊಂದು ರವಿ | ಪ್ಪಣಕೊಂದು ಬೇಳೆಯನು | ತ್ರಿಣಯನಾ ಮುಕುಟವಾದರಾ ಅಕ್ಕಸಾಲೆ | ಟೊನೆಯದೇ ಬಿಡನು ಸರ್ವಜ್ಞ ||
--------------
ಸರ್ವಜ್ಞ
ಹುಸಿವನಿಂದೈನೂರು | ಪಶುವ ಕೊಂದವ ಲೇಸು | ಶಿಶು ವಧೆಯಮಾಡಿದವ ಲೇಸು ಮರೆಯಲಿ | ದ್ದೆಸೆದರೂ ಲೇಸು ಸರ್ವಜ್ಞ ||
--------------
ಸರ್ವಜ್ಞ