ಒಟ್ಟು 40 ಕಡೆಗಳಲ್ಲಿ , 1 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯಕ್ಕೆ ಸರಿಯಿಲ್ಲ | ಮಿಥ್ಯಕ್ಕೆ ನೆಲೆಯಿಲ್ಲ | ಹೆತ್ತಮ್ಮನಿಂದ ಹಿತರಿಲ್ಲ ನರರೊಳಗೆ | ನಿತ್ಯರೇ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಸಾಲಿಗನಲಿ ಮೇಣಕ್ಕ | ಸಾಲೆಯಲಿ ನಂಬಿಕೆಯು | ಜಾಲಗಾರನ ದಯೆ ಧರ್ಮ ಮುನ್ನಾವ | ಕಾಲಕ್ಕೂ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಸೀತೆಯಿಂ ಹೆಣ್ಣಿಲ್ಲ | ಸೂತನಿಂದಾಳಿಲ್ಲ | ಮಾತಿನಲಿ ಸೋತಗಿದಿರಿಲ್ಲ ಶೂದ್ರಂಗೆ | ಭೀತಿಯೇ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಹಾಲು ಇಲ್ಲದ ಊಟ | ಬಾಲೆಯರ ಬರಿ ನೋಟ | ಕಾಲಿಲ್ಲದವನ ಹರಿದಾಟ ಕಂಗಳನ | ಕೋಲು ಕಳೆದಂತೆ ಸರ್ವಜ್ಞ ||
--------------
ಸರ್ವಜ್ಞ
ಹಾಸು ಇಲ್ಲದ ನಿದ್ರೆ | ಪೂಸು ಇಲ್ಲದ ಮೀಹ | ಭಾಷೆಯರಿಯದಳ ಗೆಳೆತನವು ಮೋಟಕ್ಕೆ | ಬೀಸಿ ಕರದಂತೆ ಸರ್ವಜ್ಞ ||
--------------
ಸರ್ವಜ್ಞ