ಒಟ್ಟು 780 ಕಡೆಗಳಲ್ಲಿ , 1 ವಚನಕಾರರು , 772 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನೆತ್ತವೂ ಕುತ್ತವೂ | ಹತ್ತದೊಡೆ ಅಳವಲ್ಲ | ಕುತ್ತದಿಂ ದೇಹ ಬಡದಕ್ಕು ನತ್ತದಿಂ | ಅತ್ತಲೇ ಅಕ್ಕು ಸರ್ವಜ್ಞ ||
ನೆತ್ತಿಯಲೆ ಉಂಬುವದು | ಸುತ್ತಲೂ ಸುರಿಸುವದು | ಎತ್ತಿದರೆ ಎರಡು ಹೋಳಹುದು ಕವಿಗಳಿಂದ ಕುತ್ತರವ ಪೇಳಿ ಸರ್ವಜ್ಞ ||
ನೆಲವನ್ನು ಮುಗಿಲನ್ನು | ಹೊಲಿವರುಂಟೆಂದರವ | ಹೊಲಿವರು ಹೊಲಿವರು ಎನಬೇಕು | ಮೂರ್ಖನಲಿ | ಕಲಹವೇ ಬೇಡ ಸರ್ವಜ್ಞ ||
ನೆವದೊಳೆಡೆಯಾಡಿಸುತ | ತವೆ ಸಖನ ನುಡಿಯಿಸುತ | ಕವಿದಿರಲು ಬಗೆದೆ ಚಿನ್ನವ ಪ್ರತಿವೆರಸಿ | ತವಕದಲಿ ತೆಗೆವ ಸರ್ವಜ್ಞ ||
ನೇತ್ರಗಳು ಕಾಣಿಸವು | ಶ್ರೋತ್ರಗಳು ಕೇಳಿಸವು | ಗಾತ್ರಗಲು ಎದ್ದು ನಡೆಯುವವು ಕೂಳೊಂದು | ರಾತ್ರಿ ತಪ್ಪಿದರೆ ಸರ್ವಜ್ಞ ||
ನೊಕಿದವರಾಗ | ಕುಕಟಿಯವನು ಲೋಕದೊಳಗೆಲ್ಲ ಕಂಡುದ - ನುಡಿವುತ ಏಕವಾಗಿಹೆನು ಸರ್ವಜ್ಞ
ನೋಟ ಶಿವಲಿಂಗದಹಲಿ | ಜೂಟ ಜ್ಂಗಮದಲಿ | ನಾಟನಾ ಮನವು ಗುರುವಿನಲಿ ಭಕ್ತನಾ ಮಾಟವನು ನೋಡು ಸರ್ವಜ್ಞ ||
ನೋಡಯ್ಯ ದೇವ ಸಲೆ | ನಾಡೆಲ್ಲ ಗಾಡಿಗನು | ವಾಡೆಯನೊಡೆದ ಮಡಕಿಯ ತೆರನಂತೆ | ಪಾಡಾಯಿತೆಂದ ಸರ್ವಜ್ಞ ||
ನೋಡಿರೇ ಎರಡೊರು | ಕೂಡಿದ ಮಧ್ಯದಲಿ ಮೂಡಿಹ ಸ್ಮರನ ಮನೆಯಲ್ಲಿ - ನಾಡೆಯುದಯಿಸಿತು ಸರ್ವಜ್ಞ
ನ್ಯಾಯದಲಿ ನಡೆದು ಅ | ನ್ಯಾಯವೇಬಂದಿಹುದು | ನಾಯಿಗಳು ಆರು ಇರುವತನಕ ನರರೊಂದು | ನಾಯಿ ಹಿಂಡೆಂದ ಸರ್ವಜ್ಞ ||
ಪಕ್ಕಲೆಯ ಸಗ್ಗಲೆಯೊ | ಳಿಕ್ಕಿರ್ದ ವಾರಿಯನು | ಚೊಕ್ಕಟವು ಎಂದು ಕುಡಿಯುತಿರೆ ಹೊಲೆಯರು | ಚಿಕ್ಕವರು ಹೇಗೆ ಸರ್ವಜ್ಞ ||
ಪಂಚ ಬೂತಂಗಳೊಳ | ಸಂಚನರಿಯದಲೆ | ಹಂಚನೆ ಹಿಡಿದು ತಿರಿದುಂಬ ಶಿವಯೋಗಿ | ಹಂಚುಹರಿಯಹನು ಸರ್ವಜ್ಞ ||
ಪಂಚತಾರೆಯ ಮೃಗದ | ಲಾಂಛನವು ಸಹ ತಾರೆ | ಕಂಚಿಯಿಂದಿತ್ತ ಮಳೆಯಿಲ್ಲ ಭತ್ತವನು | ಸಂಚಮಡಗುವದು ಸರ್ವಜ್ಞ ||
ಪಂಚಲೋಹದ ಕಂಬಿ | ಮುಂಚೆ ಭೂಮಿಗೆ ಹಾಸಿ | ಕಂಚಿನಾ ರಥವ ನಡಿಸುವರು ಅದರೋಟ | ಮಿಂಚು ಹೊಡೆದಂತೆ ಸರ್ವಜ್ಞ ||
ಪಂಚವಿಂಶತಿ ತತ್ವ | ಸಂಚಯದ ದೇಹವನು | ಹಂಚಿಂದು ಕಾಣಲರಿಯದಿರೆ ಭವ ಮುಂದೆ | ಗೊಂಚಲಾಗಿಹದು ಸರ್ವಜ್ಞ ||