ಒಟ್ಟು 1034 ಕಡೆಗಳಲ್ಲಿ , 1 ವಚನಕಾರರು , 553 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮಜ್ಜಿಗೂಟಕೆ ಲೇಸು | ಮಜ್ಜನಕೆ ಮಡಿ ಲೇಸು | ಕಜ್ಜಾಯ ತುಪ್ಪ ಉಣ ಲೇಸು | ಮನೆಗೊಬ್ಬ ಅಜ್ಜಿ ಲೇಸೆಂದ ಸರ್ವಜ್ಞ ||
ಮಠಪತಿಗೆ ಕೊರಗಿಲ್ಲ | ಕಟುಕಂಗೆ ಮರುಗಿಲ್ಲ | ಪಟವೆಂಬುದಕ್ಕೆ ನೆರಳಿಲ್ಲ ಹಟಗಾರ | ಕಟಿಲನೆಂದರಿಗು ಸರ್ವಜ್ಞ ||
ಮಡದಿ ಮಕ್ಕಳ ಮಮತೆ | ಒಡಲೊಡನೆ ಯಿರುವತನಕ | ಓದಲೊಡವೆ ಹೋದ ಮರುದಿನವೆ ಅವರೆಲ್ಲ | ಕಡೆಗೆ ಸಾರುವರು ಸರ್ವಜ್ಞ ||
ಮಡಿಯನುಟ್ಟವರನ್ನು | ನುಡಿಸುವರು ವಿನಯದಲಿ | ಒಡಹುಟ್ಟಿದವರು ಅರುವೆಯನು ಉಟ್ಟಿಹರೆ | ನುಡಿಸ ನಾಚುವರು ಸರ್ವಜ್ಞ ||
ಮಂಡೆ ಬೋಳಾದೊಡಂ | ದಂಡು ಕೋಲ್ವಿಡಿದೊಡಂ ಹೆಂಡತಿಯ ಬಿಟ್ಟು ನಡೆದೊಡಂ - ಗುರುಮುಖವ ಕಂಡಲ್ಲದಿಲ್ಲ ಸರ್ವಜ್ಞ
ಮಣಿಯ ಮಾಡಿದನೊಬ್ಬ | ಹೆಣಿದು ಕಟ್ಟಿದನೊಬ್ಬ ಕುಣಿದಾಡಿ ಸತ್ತವನೊಬ್ಬ ಸಂತೆಯೊಳು | ಹೆಣನ ಮಾರಿದರು ಸರ್ವಜ್ಞ ||
ಮಣ್ಣು ಬಿಟ್ಟವ ದೈವ | ಹೊನ್ನು ಬಿಟ್ಟವ ದೈವ | ಹೆಣ್ಣ ನೆರೆ ಬಿಟ್ಟರವ ದೈವ ಜಗಕೆ ಮು | ಕ್ಕಣ್ಣನೇ ದೈವ ಸರ್ವಜ್ಞ ||
ಮತಿಯೊಳತಿಚದುರಾಗಿ | ರತಿ ಕೇಳಿಗೊಳಗಾಗಿ | ಅತಿಮೋಹ ಮುದ್ದು ಮೊಗವಾಗಿ ಅಂಗನೆಯ | ನತಿಗಳೆದರಾರು ಸರ್ವಜ್ಞ ||
ಮದ್ದ ಮೆದ್ದವನು ಪ್ರಬುದ್ಧ ನೆಂದೆನಬೇಡ | ಮದ್ದು ಸಂಕಟವನೆಬ್ಬಿಸಲು ಹೆಡೆಕತ್ತ | ಗುದ್ದಿ ಕೊಳುತಿಹುದು | ಸರ್ವಜ್ಞ ||
ಮದ್ಯಪಾನವ ಮಾಡಿ | ಇದ್ದುದೆಲ್ಲವ ನೀಡಿ | ಬಿದ್ದು ಬರುವವನ ಸದ್ದಡಗಿ ಸಂತಾನ | ವೆದ್ದು ಹೋಗುವದು ಸರ್ವಜ್ಞ ||
ಮನ ಭಂಗವಾದಂದು | ಘನನಿದ್ರೆ ಹೋದಂದು | ವನಿತೆಯರು ಸುತರು ಜರಿದಂದು ಮರಣವೇ | ತನಗೆ ಬಂತೆಂದ ಸರ್ವಜ್ಞ ||
ಮನದಲ್ಲಿ ನೆನವಿಠಲಿ | ತನುವೊಂದು ಮಠವಕ್ಕು | ಮನಹೋಗಿ ಹಲವ ನೆನೆದಿಹರೆ ಅದು ಹಾಳು | ಮನೆಯೆಂದು ತಿಳಿಯೋ ಸರ್ವಜ್ಞ ||
ಮನದಲ್ಲಿ ನೆನೆವಂಗೆ | ಮನೆಯೇನು ಮಠವೇನು | ಮನದಲ್ಲಿ ನೆನೆಯದಿರುವವನು | ದೇಗುಲದ ಕೊನೆಯಲ್ಲಿದ್ದೇನು ? | ಸರ್ವಜ್ಞ ||
ಮನವು ಮುಟ್ಟಲು ಗಂಡು | ತನವು ಸೋಂಕಲು ಪಾಪ ಮನವೇಕದಿಂದ ಗುರುಚರಣ - ಸೋಂಕಿದೊಡೆ ತನು ಶುದ್ದವಯ್ಯ ಸರ್ವಜ್ಞ
ಮನವೆಂಬ ಮರ್ಕಟವು | ತನುವೆಂಬ ಮರನೇರಿ ತಿನುತಿಹುದು ವಿಷಯ ಫಲಗಳನು | ಕರುಣೆ ನೀ ತನುಮನ ಕಾಯೋ ಸರ್ವಜ್ನ್ಯ ||