ಒಟ್ಟು 1034 ಕಡೆಗಳಲ್ಲಿ , 1 ವಚನಕಾರರು , 553 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರ ಬೊಬ್ಬಳಿನೆಚ್ಚಿ | ಸಾರಿ ಕೆಡದಿರು ಮರುಳೆ | ಸಾರುಗುಣಿಯಾಗು ನಿಜವ ತಿಳಿ ಸರುವರೊಳು | ಕಾರುಣಿಕನಾಗು ಸರ್ವಜ್ಞ ||
--------------
ಸರ್ವಜ್ಞ
ನುಡಿಯಲ್ಲಿ ಎಚ್ಚತ್ತು | ನಡೆಯಲ್ಲಿ ತಪ್ಪಿದರೆ | ಹಿಡಿದಿರ್ಧ ಧರ್ಮ ಹೊಡೆಮರಳಿ ಕಚ್ಚುವಾ | ಹೆಡೆನಾಗನೋಡು ಸರ್ವಜ್ಞ ||
--------------
ಸರ್ವಜ್ಞ
ನುಡಿಸುವದಸತ್ಯವನು | ಕೆಡಿಸುವದು ಧರ್ಮವನು | ಹಿಡಿಸಿವದು ಕಟ್ಟಿ ಒಡಿಲ ತಾ ಲೋಭವಾ | ಹಡಣ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ನೂರು ಹಣ ಕೊಡುವನಕ | ಮೀರಿ ವಿನಯದಲಿಪ್ಪ | ನೂರರೋಳ್ಮೂರ ಕೇಳಿದರೆ ಸಾಲಿಗನು | ತೂರುಣನು ಮಣ್ಣು ಸರ್ವಜ್ಞ ||
--------------
ಸರ್ವಜ್ಞ
ನೆಗ್ಗಿ ಲಾನೆಗೆ ಹೊಲ್ಲ | ಸಿಗ್ಗು ಸೂಳೆಗೆ ಹೊಲ್ಲ | ಸುಗ್ಗಿಯಾ ಮೇಲೆ ಮಳೆಹೊಲ್ಲ ಕೊಂಡೆಯನ | ಕಿಗ್ಗಳವೆ ಹೊಲ್ಲ | ಸರ್ವಜ್ಞ ||
--------------
ಸರ್ವಜ್ಞ
ನೆತ್ತವದು ಒಳಿತೆಂದು | ನಿತ್ಯವಾಡಲು ಬೇಡ | ನೆತ್ತದಿಂ ಕುತ್ತ್ - ಮುತ್ತಲೂ ಸುತ್ತೆಲ್ಲ | ಕತ್ತಲಾಗಿಹುದು ಸರ್ವಜ್ಞ ||
--------------
ಸರ್ವಜ್ಞ
ನೆಲವನ್ನು ಮುಗಿಲನ್ನು | ಹೊಲಿವರುಂಟೆಂದರವ | ಹೊಲಿವರು ಹೊಲಿವರು ಎನಬೇಕು | ಮೂರ್ಖನಲಿ | ಕಲಹವೇ ಬೇಡ ಸರ್ವಜ್ಞ ||
--------------
ಸರ್ವಜ್ಞ
ನೋಟ ಶಿವಲಿಂಗದಹಲಿ | ಜೂಟ ಜ್ಂಗಮದಲಿ | ನಾಟನಾ ಮನವು ಗುರುವಿನಲಿ ಭಕ್ತನಾ ಮಾಟವನು ನೋಡು ಸರ್ವಜ್ಞ ||
--------------
ಸರ್ವಜ್ಞ
ನೋಡಯ್ಯ ದೇವ ಸಲೆ | ನಾಡೆಲ್ಲ ಗಾಡಿಗನು | ವಾಡೆಯನೊಡೆದ ಮಡಕಿಯ ತೆರನಂತೆ | ಪಾಡಾಯಿತೆಂದ ಸರ್ವಜ್ಞ ||
--------------
ಸರ್ವಜ್ಞ
ನೋಡಿರೇ ಎರಡೊರು | ಕೂಡಿದ ಮಧ್ಯದಲಿ ಮೂಡಿಹ ಸ್ಮರನ ಮನೆಯಲ್ಲಿ - ನಾಡೆಯುದಯಿಸಿತು ಸರ್ವಜ್ಞ
--------------
ಸರ್ವಜ್ಞ
ಪಂಚತಾರೆಯ ಮೃಗದ | ಲಾಂಛನವು ಸಹ ತಾರೆ | ಕಂಚಿಯಿಂದಿತ್ತ ಮಳೆಯಿಲ್ಲ ಭತ್ತವನು | ಸಂಚಮಡಗುವದು ಸರ್ವಜ್ಞ ||
--------------
ಸರ್ವಜ್ಞ
ಪಂಚಲೋಹದ ಕಂಬಿ | ಮುಂಚೆ ಭೂಮಿಗೆ ಹಾಸಿ | ಕಂಚಿನಾ ರಥವ ನಡಿಸುವರು ಅದರೋಟ | ಮಿಂಚು ಹೊಡೆದಂತೆ ಸರ್ವಜ್ಞ ||
--------------
ಸರ್ವಜ್ಞ
ಪಂಚವಿಂಶತಿ ತತ್ವ | ಸಂಚಯದ ದೇಹವನು | ಹಂಚಿಂದು ಕಾಣಲರಿಯದಿರೆ ಭವ ಮುಂದೆ | ಗೊಂಚಲಾಗಿಹದು ಸರ್ವಜ್ಞ ||
--------------
ಸರ್ವಜ್ಞ
ಪಂಚವಿಂಶಶಿತತ್ವ | ಸಂಚದ ದೇಹವನು ಹಂಚೆಂದು ಕಾಣಲರಿಳೆಯದೋಡೆ - ಭವ ಮುಂದೆ ಗೊಂಚಲಾಗಿಹುದು ಸರ್ವಜ್ಞ
--------------
ಸರ್ವಜ್ಞ
ಪಮಚಾಳಯ್ವರುಂ | ವಂಚನೆಗೆ ಗುರುಗಳೇ | ಕಿಂಚಿತ್ತು ನಂಬಿ ಕೆಡಬೇಡ ತಿಗುಣಿಯಾ ಮಂಚದಂತಿಹರು ಸರ್ವಜ್ಞ ||
--------------
ಸರ್ವಜ್ಞ