ಒಟ್ಟು 1015 ಕಡೆಗಳಲ್ಲಿ , 1 ವಚನಕಾರರು , 540 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನಾಲಿಗೆಯ ಕೀಲವನು | ಶೀಲದಲ್ಲಿ ತಾನರಿದು | ಶೂಲವದು ರುಚಿಯು ಎಂದಿರುವನು ಮುದಿಯಲ್ಲಿ | ಬಾಲನಂತಿಹನು ಸರ್ವಜ್ಞ ||
ನಿಜ ವಿಜಯ ಬಿಂದುವಿನ | ಧ್ವಜಪತಾಕೆಯ ಬಿರುದು | ಅಜ ಹರಿಯು ನುತಿಸಲರಿಯರಾ ಮಂತ್ರವನು | ನಿಜಯೋಗಿ ಬಲ್ಲ ಸರ್ವಜ್ನ್ಯ ||
ನಿದ್ದೆಗಳು ಬಾರದವು | ಬುದ್ಧಿಗಳೂ ತಿಳಿಯುವವು | ಮುದ್ದಿನ ಮಾತುಗಳು ಸೊಗಸದದು ಬೋನದಾ | ಮುದ್ದೆ ತಪ್ಪಿದರೆ ಸರ್ವಜ್ಞ ||
ನಿದ್ದೆಯಲಿ ಬುದ್ಧಿಲ್ಲ ಭದ್ರೆಗಂ ತಾಯಿಲ್ಲ | ಕದ್ದು ಕೊಂಬಂಗೆ ಬದುಕಿಲ್ಲ | ಮರಣಕ್ಕೆ ಮದ್ದುಗಳೆ ಇಲ್ಲ ಸರ್ವಜ್ಞ ||
ನಿಂಬೆಗಿಂ ಹುಳಿಯಿಲ್ಲ | ತುಂಬೆಗಿಂ ಕರಿದಿಲ್ಲ | ನಂಬಿಗೆಯಿಂದಧಿಕ ಗುಣ್ವವಿಲ್ಲ | ದೈವವುಂ | ಶುಭವಿಂದಿಲ್ಲ ಸರ್ವಜ್ಞ ||
ನಿಲ್ಲದಲೆ ಹರಸಿದಡೆ | ಕಲ್ಲು ಭೇದಿಸಲಕ್ಕು | ಬಲ್ಲಂತ ಶಿವನ ಭಕ್ತಿಯಿಂ ಭಜಿಸಿಡೆ | ಇಲ್ಲೆನಲಿಕರಿಯ ಸರ್ವಜ್ಞ ||
ನಿಶ್ಚಯವ ಬಿಡದೊಬ್ಬ | ರಿಚ್ಛೆಯಲಿ ನುಡಿಯದಿರು | ನೆಚ್ಚಿ ಒಂದೊರೊಳಗಿರದಿರು ಶಿವ ನಿನ್ನ ಇಚ್ಛೆಯೊಳಗಿಹನು ಸರ್ವಜ್ಞ ||
ನೀರ ಬೊಬ್ಬಳಿನೆಚ್ಚಿ | ಸಾರಿ ಕೆಡದಿರು ಮರುಳೆ | ಸಾರುಗುಣಿಯಾಗು ನಿಜವ ತಿಳಿ ಸರುವರೊಳು | ಕಾರುಣಿಕನಾಗು ಸರ್ವಜ್ಞ ||
ನೆತ್ತವದು ಒಳಿತೆಂದು | ನಿತ್ಯವಾಡಲು ಬೇಡ | ನೆತ್ತದಿಂ ಕುತ್ತ್ - ಮುತ್ತಲೂ ಸುತ್ತೆಲ್ಲ | ಕತ್ತಲಾಗಿಹುದು ಸರ್ವಜ್ಞ ||
ನೆತ್ತವೂ ಕುತ್ತವೂ | ಹತ್ತದೊಡೆ ಅಳವಲ್ಲ | ಕುತ್ತದಿಂ ದೇಹ ಬಡದಕ್ಕು ನತ್ತದಿಂ | ಅತ್ತಲೇ ಅಕ್ಕು ಸರ್ವಜ್ಞ ||
ನೆತ್ತಿಯಲೆ ಉಂಬುವದು | ಸುತ್ತಲೂ ಸುರಿಸುವದು | ಎತ್ತಿದರೆ ಎರಡು ಹೋಳಹುದು ಕವಿಗಳಿಂದ ಕುತ್ತರವ ಪೇಳಿ ಸರ್ವಜ್ಞ ||
ನೆಲವನ್ನು ಮುಗಿಲನ್ನು | ಹೊಲಿವರುಂಟೆಂದರವ | ಹೊಲಿವರು ಹೊಲಿವರು ಎನಬೇಕು | ಮೂರ್ಖನಲಿ | ಕಲಹವೇ ಬೇಡ ಸರ್ವಜ್ಞ ||
ನೆವದೊಳೆಡೆಯಾಡಿಸುತ | ತವೆ ಸಖನ ನುಡಿಯಿಸುತ | ಕವಿದಿರಲು ಬಗೆದೆ ಚಿನ್ನವ ಪ್ರತಿವೆರಸಿ | ತವಕದಲಿ ತೆಗೆವ ಸರ್ವಜ್ಞ ||
ನ್ಯಾಯದಲಿ ನಡೆದು ಅ | ನ್ಯಾಯವೇಬಂದಿಹುದು | ನಾಯಿಗಳು ಆರು ಇರುವತನಕ ನರರೊಂದು | ನಾಯಿ ಹಿಂಡೆಂದ ಸರ್ವಜ್ಞ ||
ಪಂಚ ಬೂತಂಗಳೊಳ | ಸಂಚನರಿಯದಲೆ | ಹಂಚನೆ ಹಿಡಿದು ತಿರಿದುಂಬ ಶಿವಯೋಗಿ | ಹಂಚುಹರಿಯಹನು ಸರ್ವಜ್ಞ ||