ಒಟ್ಟು 26 ಕಡೆಗಳಲ್ಲಿ , 1 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುಷ್ಪ ವಿಲ್ಲದ ಪೂಜೆ | ಅಶ್ವವಿಲ್ಲದ ಅರಸು | ಒಪ್ಪಲೊಲ್ಲವಳ ನಗೆನುಡಿಯು ಇವು ಮೂರು | ಚಪ್ಪೆ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಬಂಧನದಲಿರುವನು | ಹಂದಿಯಂತಿಹನು ಬಂಧವಿಲ್ಲದವನು ಬಡವನು ದೇಶಿಗನು | ಎಂದಳಿದರೇನು ಸರ್ವಜ್ಞ ||
--------------
ಸರ್ವಜ್ಞ
ಮೊಸರು ಇಲ್ಲದ ಊಟ | ಪಸರವಿಲ್ಲದ ಕಟಕ | ಹಸನವಿಲ್ಲದಳ ರತಿಕೂಟ ಜಿನನ ಬಾಯ್ | ಕಿಸುಕುಳದಂತೆ ಸರ್ವಜ್ಞ ||
--------------
ಸರ್ವಜ್ಞ
ವಿದ್ಯೆವುಳ್ಳನ ಮುಖವು | ಮುದ್ದು ಬರುವಂತಿಕ್ಕು | ವಿದ್ಯವಿಲ್ಲದನ ಬರಿಮುಖವು ಹಾಳೂರ | ಹದ್ದಿನಂತಿಕ್ಕು ಸರ್ವಜ್ಞ ||
--------------
ಸರ್ವಜ್ಞ
ವೀಳ್ಯವಿಲ್ಲದ ಬಾಯಿ | ಕೂಳು ಇಲ್ಲದ ನಾಯಿ | ಬಾಳೆಗಳು ಇಲ್ಲದೆಲೆದೋಟ ಪಾತರದ | ಮೇಳ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಶ್ವಾನ ತೆಂಗಿನ ಕಾಯ | ತಾನು ಮೆಲಬಲ್ಲುದೇ ಜ್ಞಾನವಿಲ್ಲದಗೆ ಉಪದೇಶ - ವಿತ್ತಡೆ ಹಾನಿ ಕಂಡಯ್ಯ ಸರ್ವಜ್ಞ
--------------
ಸರ್ವಜ್ಞ
ಹರನಾವ ಕರೆಯದಲೆ | ಪರಿಶಿವನ ನೆನೆಯದಲೆ | ಸ್ಮರಹರನ ಕರುಣವಿಲ್ಲದೆಯೆ ಜಗದೊಳಗೆ ಇರುವದೇ ಕಷ್ಟ ಸರ್ವಜ್ಞ ||
--------------
ಸರ್ವಜ್ಞ
ಹಸಿವಿಲ್ಲದುಣಬೇಡ | ಹಸಿದು ಮತ್ತಿರಬೇಡ | ಬಿಸಿಬೇಡ ತಂಗಳುಣಬೇಡ ವೈದ್ಯನಾ | ಗಸಣಿಯೇ ಬೇಡ ಸರ್ವಜ್ಞ ||
--------------
ಸರ್ವಜ್ಞ
ಹಾಲು ಬೋನವು ಲೇಸು | ಮಾಲೆ ಕೊರಳಿಗೆ ಲೇಸು | ಸಾಲವಿಲ್ಲದವನ ಮನೆ ಲೇಸು | ಬಾಲರ ಲೀಲೆ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ