ಒಟ್ಟು 31 ಕಡೆಗಳಲ್ಲಿ , 1 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಟ್ಟಡವಿಯಾ ಮಳೆಯು | ದುಷ್ಟರಾ ಗೆಳೆತನವು | ಕಪ್ಪೆಯಾದವಳ ತಲೆಬೇನೆ ಇವು ಮೂರು ಕೆಟ್ಟರೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ನೂರು ಹಣ ಕೊಡುವನಕ | ಮೀರಿ ವಿನಯದಲಿಪ್ಪ | ನೂರರೋಳ್ಮೂರ ಕೇಳಿದರೆ ಸಾಲಿಗನು | ತೂರುಣನು ಮಣ್ಣು ಸರ್ವಜ್ಞ ||
--------------
ಸರ್ವಜ್ಞ
ನೆಲವನ್ನು ಮುಗಿಲನ್ನು | ಹೊಲಿವರುಂಟೆಂದರವ | ಹೊಲಿವರು ಹೊಲಿವರು ಎನಬೇಕು | ಮೂರ್ಖನಲಿ | ಕಲಹವೇ ಬೇಡ ಸರ್ವಜ್ಞ ||
--------------
ಸರ್ವಜ್ಞ
ಪುಷ್ಪ ವಿಲ್ಲದ ಪೂಜೆ | ಅಶ್ವವಿಲ್ಲದ ಅರಸು | ಒಪ್ಪಲೊಲ್ಲವಳ ನಗೆನುಡಿಯು ಇವು ಮೂರು | ಚಪ್ಪೆ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಬೆಟ್ಟವನು ಕೊಂಡೊಂಬ್ಬ | ನಿಟ್ಟಿಹನು ಎಂದಿಹರೆ ಇಟ್ಟಿಹನು ಎಂದು ಎನಬೇಕು ಮೂರ್ಖನಾ | ಬಟ್ಟೆ ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಮೀರಿ ಬೆಳೆಯಲ್ಕೆನಗೆ | ಅರಿ ಬಣ್ಣವನುಡಿಸಿ ಮೂರು ರುಚಿದೋಳು ಶಿವ - ತನ್ನನು ತೋರದೇ ಹೋದ ಸರ್ವಜ್ಞ
--------------
ಸರ್ವಜ್ಞ
ಮೂರು ಕಾಲಲಿ ನಿಂದು | ಗೀರಿ ತಿಂಬುವದು ಮರವ | ಆರಾರು ನೀರು ಕುಡಿಯುವದು ಕವಿಗಳಲಿ | ಧೀರರಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಮೂರು ಖಂಡುಗ ಹೊಟ್ಟ | ತೂರಿದರೆ ಫಲವೇನು | ಮೂರರಾ ಮಂತ್ರದಿಂದಲಿ ಪರಬೊಮ್ಮ | ವಿರಿಹುದು ನೋಡು ಸರ್ವಜ್ಞ ||
--------------
ಸರ್ವಜ್ಞ
ಮೂರು ಗಾವುದವನ್ನು ಹಾರಬಹುದೆಂದವರ | ಹಾರಬಹುದೆಂದು ಎನಬೇಕು ಮೂರ್ಖನಾ | ಹೋರಾಟ ಸಲ್ಲ ಸರ್ವಜ್ಞ ||
--------------
ಸರ್ವಜ್ಞ
ಮೂರುಕಣ್ಣೀಶ್ವರನ | ತೋರಿಕೊಡಬಲ್ಲ ಗುರು ಬೇರರಿವುದೊಂದು ತೆರನಿಲ್ಲ - ಗುರುಕರಣ ತೋರಿಸುಗು ಶಿವನ ಸರ್ವಜ್ಞ
--------------
ಸರ್ವಜ್ಞ
ಮೂರ್ಖಂಗೆ ಬುದ್ಧಿಯನು | ನೂರ್ಕಾಲ ಹೇಳಿದರೆ ಬೋರ್ಕಲ್ಲ ಮೇಲೆ ಮಳಿಗರಿದರಾ ಕಲ್ಲು | ನೀರ್ಕೊಳ್ಳಬಹುದೆ ಸರ್ವಜ್ಞ ||
--------------
ಸರ್ವಜ್ಞ
ಮೊಲನಾಯ ಬೆನ್ನಟ್ಟಿ | ಗೆಲಬಹುದು ಎಂದಿಹರೆ | ಗೆಲಭುದು ಎಂದು ಎನಬೇಕು ಮೂರ್ಖನಲಿ | ಛಲವು ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಹುಸಿವನ ಬೇಹಾರ | ಕಸ ಹತ್ತಿದಾರಂಬ ವಿಷಯ ಉಳ್ಳವನ ಗುರುತನ - ಇವು ಮೂರು ಮಸಿವಣ್ಣ ಕಂಡ ಸರ್ವಜ್ಞ
--------------
ಸರ್ವಜ್ಞ
ಹೊಳೆಯ ನೀರೊಬ್ಬನೇ | ಅಳೆಯಬಹುದೆಂದರವ | ಅಳೆಯಬಹುದೆಂದು ಎನಬೇಕು ಮೂರ್ಖನಂ | ಗೆದೆಯಲಳವಲ್ಲ | ಸರ್ವಜ್ಞ ||
--------------
ಸರ್ವಜ್ಞ