ಒಟ್ಟು 25 ಕಡೆಗಳಲ್ಲಿ , 1 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಣಿಯ ಮಾಡಿದನೊಬ್ಬ | ಹೆಣಿದು ಕಟ್ಟಿದನೊಬ್ಬ ಕುಣಿದಾಡಿ ಸತ್ತವನೊಬ್ಬ ಸಂತೆಯೊಳು | ಹೆಣನ ಮಾರಿದರು ಸರ್ವಜ್ಞ ||
--------------
ಸರ್ವಜ್ಞ
ಮದ್ಯಪಾನವ ಮಾಡಿ | ಇದ್ದುದೆಲ್ಲವ ನೀಡಿ | ಬಿದ್ದು ಬರುವವನ ಸದ್ದಡಗಿ ಸಂತಾನ | ವೆದ್ದು ಹೋಗುವದು ಸರ್ವಜ್ಞ ||
--------------
ಸರ್ವಜ್ಞ
ಮುನ್ನ ಮಾಡಿದ ಪಾಪ | ಹೊನ್ನಿನಿಂ ಪೋಪುದೇ ? ಹೊನ್ನಿನಾ ಪುಣ್ಯವದು ಬೇರೆ; ಪಾಪ ತಾ | ಮುನ್ನಿನಂತಿಹುದು ಸರ್ವಜ್ಞ ||
--------------
ಸರ್ವಜ್ಞ
ವಿಷಯದಾ ಬೇರನ್ನು | ಬಿಸಿಮಾಡಿ ಕುಡಿದಾತ ಪಶು ಪತಿಯು ಅಕ್ಕ ಶಶಿಯಕ್ಕು ಮೈಯ್ಬಣ್ಣ ಮಿಸಿನಿಯಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಸಂದಿರ್ದ ಮಾಸವನು | ಕುಂದದಿಮ್ಮಡಿ ಮಾಡಿ | ಅಂದಿನಾ ತಿಥಿಯ ನೊಡಗೂಡಲಾ ತಾರೆ | ಮುಂದೆ ಬಂದಿಹುದು ಸರ್ವಜ್ಞ ||
--------------
ಸರ್ವಜ್ಞ
ಸುಂಕದ ಅಣ್ಣಗಳಾ | ಬಿಂಕವನು ಏನೆಂಬೆ | ಸುಂಕಕ್ಕೆ ಸಟಿಯ ನೆರೆಮಾಡಿ ಕಡೆಯಲ್ಲಿ ಟೊಂಕ ಮುರಿದಿಹುದು ಸರ್ವಜ್ಞ ||
--------------
ಸರ್ವಜ್ಞ
ಸುಡುವಗ್ನಿಯನು ತಂದು | ಅಡಿಗೆ ಮಾಡಿದ ಮೇಲೆ | ಒಡನುಣ್ಣದಾಗದಿಂತೆಂಬ ಮನುಜರ್‍ಆ | ಒಡನಾಟವೇಕೆ ಸರ್ವಜ್ಞ ||
--------------
ಸರ್ವಜ್ಞ
ಹಿಂದೆ ಪಾಪವ ಮಾಡಿ | ಮುಂದೆ ಪುಣ್ಯವು ಹೇಗೆ | ಹಿಂದು - ಮುಂದರಿದು ನಡೆಯದಿರೆ ನರಕದಲಿ ಬೆಂದು ಸಾಯುವನು ಸರ್ವಜ್ಞ ||
--------------
ಸರ್ವಜ್ಞ
ಹುಸಿವನಿಂದೈನೂರು | ಪಶುವ ಕೊಂದವ ಲೇಸು | ಶಿಶು ವಧೆಯಮಾಡಿದವ ಲೇಸು ಮರೆಯಲಿ | ದ್ದೆಸೆದರೂ ಲೇಸು ಸರ್ವಜ್ಞ ||
--------------
ಸರ್ವಜ್ಞ