ಒಟ್ಟು 1034 ಕಡೆಗಳಲ್ಲಿ , 1 ವಚನಕಾರರು , 553 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಡಿಯನಿಮ್ಮಡಿ ಮಾಡಿ | ಒಡಕೂಡಿ ಹನ್ನೊಂದು ತಡೆಯದಿನ್ನೂರು ಹತ್ತಕ್ಕೆ ಭಾಗಿಸಲು | ನಡೆವ ಗಳಿಗಕ್ಕು ಸರ್ವಜ್ಞ ||
--------------
ಸರ್ವಜ್ಞ
ಅಣುರೇಣುವೃಂದ್ಯದಾ | ಪ್ರಣವದಾ ಬೀಜವನು | ಅಣುವಿನೊಳಗುಣವೆಂದರಿದಾ ಮಹಾತ್ಮನು | ತ್ರಿಣಯನೇ ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ಅತಿಯಾಶೆ ಮಾಡುವನು | ಗತಿಗೇಡಿಯಾಗುವನು ಅತಿಯಾಶೆಯಿಂದ ಮತಿ ಕೆಡಗು ರತಿಯಿಂದ | ಸತಿ-ಸುತರು ಕೆಡಗು ಸರ್ವಜ್ಞ ||
--------------
ಸರ್ವಜ್ಞ
ಅತ್ತೆ ಮಾಡಿದ ತಪ್ಪು | ಗೊತ್ತಿಲ್ಲದಡಗಿಹುದು | ತೊತ್ತದನು ಮಾಡಿದಾಕ್ಷಣದಿ ಸುತ್ತಲುಂ | ಗೊತ್ತಿಹುದು ನೋಡ ಸರ್ವಜ್ಞ ||
--------------
ಸರ್ವಜ್ಞ
ಅಂದಿನಾ | ಪುಷ್ಪದತ್ತ || ಬಂದ ವರರುಚಿಯಾಗಿ ಮುಂ ದೇವಸಾಲೆ ಸರ್ವಜ್ಞ - ನೆಂದೆನಿಸಿ ನಿಂದವನು ತಾನೇ ಸರ್ವಜ್ಞ
--------------
ಸರ್ವಜ್ಞ
ಅಂದು ಕಾಮನ ಹರನು | ಕೊಂದನೆಂಬುದು ಪುಸಿಯು | ಇಂದುವದನೆಯರ ಕಡೆಗಣ್ಣ ನೋಟದಲಿ | ನಿಂದಿಹನು ಸ್ಮರನು ಸರ್ವಜ್ಞ ||
--------------
ಸರ್ವಜ್ಞ
ಅಂಧಕನು ನಿಂದಿರಲು | ಮುಂದೆ ಬಪ್ಪರ ಕಾಣ | ಬಂದರೆ ಬಾರೆಂದೆನರ್ಪ ಗರ್ವಿಯಾ | ದಂದುಗನೆ ಬೇಡ ಸರ್ವಜ್ಞ ||
--------------
ಸರ್ವಜ್ಞ
ಅನ್ನದೇವರ ಮುಂದೆ | ಇನ್ನು ದೇವರು ಉಂಟೆ | ಅನ್ನವಿರುವನಕ ಪ್ರಾಣವೀ ಜಗದೊಳಗೆ | ಅನ್ನದೈವ ಸರ್ವಜ್ಞ ||
--------------
ಸರ್ವಜ್ಞ
ಅಪ್ಪ ಹಾಕಿದ ಗಿಡವು | ಒಪ್ಪುತ್ತಲಿರುತಿರಲು | ತಪ್ಪಿಲ್ಲವೆಂದು ಅದನೇರಿ ಮಗನುರ್ಲ | ಗೊಪ್ಪಿಕೊಳ್ಳುವನೆ ಸರ್ವಜ್ಞ ||
--------------
ಸರ್ವಜ್ಞ
ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ ಇಂದಿನ | ಕಳೆಯ | ಮಾಳಿಯೊಳು - ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ
--------------
ಸರ್ವಜ್ಞ
ಅಂಬುದಿಯ ಗಾಢವನು | ಅಂಬರದ ಕಲಹವನು | ಶಂಭುವಿನ ಮಹಿಮೆ ಸತಿಯರಾ ಹೃದಯದಾ ಇಂಭರಿದವರಾರು ಸರ್ವಜ್ಞ ||
--------------
ಸರ್ವಜ್ಞ
ಅರಮನೆಯಲಿರುತಿಹುದು | ಕರದಲ್ಲಿ ಬರುತಿಹುದು | ಕೊರೆದು ವಂಶಜರ ತಿನುತಿಹುದು | ಕವಿಗಳಲಿ | ದೊರೆಗಳಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಅರಿತಂಗೆ ಅರವತ್ತು | ಮರೆತಂಗೆ ಮೂವತ್ತು | ಬರೆವಂಗೆ ರಾಜ್ಯ ಸರಿಪಾಲು | ಹಾರುವನು | ಬರೆಯದೇ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಅರಿತವರ ಮುಂದೆ ತ | ನ್ನರಿವನ್ನು ಮೆರೆಯುವದು | ಅರಿಯದನ ಮುಂದೆ ಮೆರೆದರಾ ಹೊನ್ನೆಂಬ | ತೊರೆಯ ಲೆಚ್ಚಂತೆ ಸರ್ವಜ್ಞ ||
--------------
ಸರ್ವಜ್ಞ
ಅರಿತು ಮಾಡಿದ ಪಾಪ | ಮರೆತರದು ಪೋಪುದೇ | ಮರೆತರಾಮರವ ಬಿಡಿಸುವದು ಕೊರೆತೆಯದು | ಅರಿತು ನೋಡೆಂದ ಸರ್ವಜ್ಞ ||
--------------
ಸರ್ವಜ್ಞ