ಒಟ್ಟು 218 ಕಡೆಗಳಲ್ಲಿ , 1 ವಚನಕಾರರು , 181 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಡಿ ಮರಗಲು ಹೊಲ್ಲ | ಕೂಡಿ ಕಾದಲು ಹೊಲ್ಲ | ಬೇಡನಾ ನಂಟು ತರವಲ್ಲ ಅವನ ಕುರಿ | ತಾಡುವದೆ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಆಡಿ ಹುಸಿಯಲು ಹೊಲ್ಲ | ಕೂಡಿ ತಪ್ಪಲು ಹೊಲ್ಲ | ಕಾಡುವಾ ನೆಂಟ ಬರ ಹೊಲ್ಲ ಸಟಿಯ | ನಾಡುವನೆ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಆಡಿಗಟ್ಟಣವೇಕೆ | ಬೋಡಂಗೆ ಕಬ್ಬೇಕೆ | ಕೋಡಗನ ಕೈಯ ಬಳೆಯೇಕೆ ಬಡವಂಗೆ | ನಾಡಮಾತೇಕೆ ಸರ್ವಜ್ಞ ||
--------------
ಸರ್ವಜ್ಞ
ಆಡಿಗಡಿಕೆಯ ಹೊಲ್ಲ | ಗೋಡೆ ಬಿರುಕಲು ಹೊಲ್ಲ | ಒಡಕಿನಾ ಮನೆಯೊಳಿರ ಹೊಲ್ಲ ಬಡವಂಗೆ | ಸಿಡುಕು ತಾ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಆರಾರ ನಂಬುವಡೆ | ಆರಯ್ದು ನಂಬುವದು | ನಾರಾಯಣನಿಂದ ಬಲಿಕೆಟ್ಟ | ಮಿಕ್ಕವರ ನಾರು ನಂಬುವರು ಸರ್ವಜ್ಞ ||
--------------
ಸರ್ವಜ್ಞ
ಆರು ಬೆಟ್ಟವನೊಬ್ಬ | ಹಾರಬಹುದೆಂದಿಹರೆ | ಹಾರಬಹುದೆಂದು ಎನಬೇಕು | ಮೂರ್ಖನಾ | ಹೋರಾಟ ಸಲ್ಲ ಸರ್ವಜ್ಞ ||
--------------
ಸರ್ವಜ್ಞ
ಆಶೆಯತಿ ಕೇಡೆಂದು | ಹೇಸಿ ನಾಚುತಲಿಕ್ಕು | ಆಶೆಯನು ಬಿಡದೆ - ಅಭಿಮಾನಕ್ಕೋರಿದರೆ | ಘಾಸಿಯಾಗಿಕ್ಕು ಸರ್ವಜ್ಞ ||
--------------
ಸರ್ವಜ್ಞ
ಆಸನವು ದೃಢವಾಗಿ | ನಾಶಿಕಾಗ್ರದಿ ದಿಟ್ಟು | ಸೂಸವ ಮನವ ಫನದಲಿರಿಸಿದನು ಜಗ | ದೀಶ ತಾನಕ್ಕು ಸರ್ವಜ್ಞ ||
--------------
ಸರ್ವಜ್ಞ
ಆಳು ಸೂಳೆಯು ನಾಯಿ | ಕೋಳಿ ಜೋಯಿಸ ವೈದ್ಯ | ಗೂಳಿಯು ತಗರು ಪ್ರತಿರೂಪ ಕಂಡಲ್ಲಿ | ಕಾಳಗವು ಎಂದ ಸರ್ವಜ್ಞ ||
--------------
ಸರ್ವಜ್ಞ
ಇದ್ದಲ್ಲಿ ಸಲುವ ಹೋ | ಗಿದ್ದಲ್ಲಿಯೂ ಸಲುವ | ವಿದ್ಯೆಯನ್ನು ಬಲ್ಲ ಬಡವನಾ ಗಿರಿಯ | ಮೇಲಿರಲು ಸಲುವ ಸರ್ವಜ್ಞ ||
--------------
ಸರ್ವಜ್ಞ
ಇಂದ್ರನಾನೆಯನೇರೆ | ಒಂದುವನು ಕೊಡಲರೆಯ ಚಂದ್ರಶೇಖರನು ಮುದಿಯೆತ್ತ - ನೇರೆ ಬೇ ಕೆಂದುದನು ಕೊಡುವ ಸರ್ವಜ್ಞ
--------------
ಸರ್ವಜ್ಞ
ಇನ್ನು ಬಲ್ಲರೆ ಕಾಯಿ | ಮುನ್ನಾರಾ ಅರವತ್ತು | ಹಣ್ಣು ಹನ್ನೆರಡು ಗೊನೆ ಮೂರು ತೊಟ್ಟೊಂದು | ಚನ್ನಾಗಿ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಉಂಡು ಕೆಂಡವ ಕಾಸಿ | ಶತಪಥ ನಡೆದು | ಉಂಡೆಡದ ಮಗ್ಗುಲಲಿ ಮಲಗೆ ವೈದ್ಯನಾ | ಭಂಡಾಟವಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಉಂಡು ನೂರಡಿ ಎಣಸಿ | ಕೆಂಡಕ್ಕೆ ಕೈ ಕಾಸಿ | ಗಂಡು ಮೇಲಾಗಿ ಮಲಗಿದನು ವೈದ್ಯನಾ | ಮಿಂಡ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಉದ್ದರಿಯ ಕೊಟ್ಟಣ್ಣ | ಹದ್ದಾದ ಹಾವಾದ | ಎದ್ದೆದ್ದು ಬರುವ ನಾಯಾದ ಮೈಲಾರ ಗೊಗ್ಗಯ್ಯನಾದ ಸರ್ವಜ್ಞ ||
--------------
ಸರ್ವಜ್ಞ