ಒಟ್ಟು 22 ಕಡೆಗಳಲ್ಲಿ , 1 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲ್ಲಿಗೆಗೆ ಹುಳಿಯಕ್ಕು | ಕಲ್ಲಿಗೇ ಗಂಟಕ್ಕು | ಹಲ್ಲಿಗಂ ನೊಣನು ಸವಿಯಕ್ಕು ಕನ್ನಡದ | ಸೊಲ್ಲಗಳ ನೋಡಿ ಸರ್ವಜ್ಞ ||
--------------
ಸರ್ವಜ್ಞ
ಮೂರ್ಖಂಗೆ ಬುದ್ಧಿಯನು | ನೂರ್ಕಾಲ ಹೇಳಿದರೆ ಬೋರ್ಕಲ್ಲ ಮೇಲೆ ಮಳಿಗರಿದರಾ ಕಲ್ಲು | ನೀರ್ಕೊಳ್ಳಬಹುದೆ ಸರ್ವಜ್ಞ ||
--------------
ಸರ್ವಜ್ಞ
ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ ಕಾಣೆಸುತಿಹುದು ಸರ್ವಜ್ಞ
--------------
ಸರ್ವಜ್ಞ
ಹಣತೆ ಭತ್ತವು ಅಲ್ಲ | ಅಣಬೆ ಸತ್ತಿಗೆಯಲ್ಲ | ಕಣಕದಾ ಕಲ್ಲು ಮಣಿಯಲ್ಲ ಬಣಜಿಗನು | ಗುಣವಂತನಲ್ಲ ಸರ್ವಜ್ಞ ||
--------------
ಸರ್ವಜ್ಞ
ಹಲ್ಲಮೇಲಿನ ಕೆಂಪು | ಕಲ್ಲ ಮೇಲಿನ ಹಾಂಸೆ | ಮಲ್ಲಿಗೆಯ ಅರಳತನಿಗಂಪು ಹೊಸಮೋಹ | ನಿಲ್ಲವು ಕಾಣಾ ಸರ್ವಜ್ಞ ||
--------------
ಸರ್ವಜ್ಞ