ಒಟ್ಟು 106 ಕಡೆಗಳಲ್ಲಿ , 1 ವಚನಕಾರರು , 91 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಡಿಗಳೆದ್ದೇಳವು | ನುಡಿಗಳೂ ಕೇಳಿಸವು ಮಡದಿಯರ ಮಾತು ಸೊಗಸದು ಕೂಳೊಂದು | ತಡೆದರರಗಳಿಗೆ ಸರ್ವಜ್ಞ ||
--------------
ಸರ್ವಜ್ಞ
ಆಡಿದರೆ ಹಾಡುವದು | ಓಡಿ ಮರವನೇರುವದು | ಕೂಡದೆ ಕೊಂಕಿ ನಡೆಯುವದು ಹರಿದರದು | ಬಾಡದು ಸರ್ವಜ್ಞ ||
--------------
ಸರ್ವಜ್ಞ
ಆಡುವವ ಕೆಟ್ಟಂತೆ | ನೋಡಹೋದವ ಕೆಟ್ಟ | ಬೇದುವವ ಕೆಟ್ಟ ನೆತ್ತವನು ಆಡುವನ | ಕೂಡಿದವ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಆದಿಯಲಿ ಜಿನನಿಲ್ಲ | ವೇದದಲಿ ಹುಸಿಯಿಲ್ಲ | ವಾದದಿಂದಾವ ಧನವಿಲ್ಲ ಸ್ವರ್ಗದಿ | ಮಾದಿಗರೆ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಆದಿಯಾ ಮಾಸವನು | ವೇದದಿಂದಲಿ ಗುಣಿಸಿ | ಆ ದಿನದ ತಿಥಿಯನೊಡಿಸಲು ಯೋಗ | ವಾದಿನದ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ಆನೆ ಕನ್ನಡಿಯಲ್ಲಿ | ತಾನಡಗಿ ಇಪ್ಪಂತೆ | ಜ್ಞಾನವುಳ್ಳವರ ಹೃದಯದಲಿ ಪರಶಿವನು | ತಾನಡಗಿ ಇಹನು ಸರ್ವಜ್ಞ ||
--------------
ಸರ್ವಜ್ಞ
ಆರಯ್ದು ನುಡಿವವನು | ಆರಯ್ದು ನಡೆವವನು | ಆರಯ್ದು ಪದವ ನಿಡುವವನು ಲೋಕಕ್ಕೆ ಆರಾಧ್ಯನಕ್ಕು ಸರ್ವಜ್ಞ ||
--------------
ಸರ್ವಜ್ಞ
ಆರರಟ್ಟುಗಳಿಗಳನು | ಮೂರು ಕಂಟಕರನ್ನು | ಏರು ಜವ್ವನವ ತಡೆಯುವರೆ ಶಿವ ತಾನು | ಬೇರೆ ಇಲ್ಲೆಂದ ಸರ್ವಜ್ಞ ||
--------------
ಸರ್ವಜ್ಞ
ಆರಾರ ನಂಬುವಡೆ | ಆರಯ್ದು ನಂಬುವದು | ನಾರಾಯಣನಿಂದ ಬಲಿಕೆಟ್ಟ | ಮಿಕ್ಕವರ ನಾರು ನಂಬುವರು ಸರ್ವಜ್ಞ ||
--------------
ಸರ್ವಜ್ಞ
ಆರು ಬೆಟ್ಟವನೊಬ್ಬ | ಹಾರಬಹುದೆಂದಿಹರೆ | ಹಾರಬಹುದೆಂದು ಎನಬೇಕು | ಮೂರ್ಖನಾ | ಹೋರಾಟ ಸಲ್ಲ ಸರ್ವಜ್ಞ ||
--------------
ಸರ್ವಜ್ಞ
ಆಲಸಿಕೆಯಲಿರುವಂಗೆ ಕ್ಲಸಲಂಬಲಿಯಿಲ್ಲ | ಕೆಲಸಕ್ಕೆ ಆಲಸದಿರುವಂಗೆ ಬೇರಿಂದ | ಹಲಸು ಕಾತಂತೆ ಸರ್ವಜ್ಞ ||
--------------
ಸರ್ವಜ್ಞ
ಆವ ಕಾಲವು ವನದಿ | ಜೀವಕಾಲದ ಕಳೆದು | ಜೀವಚಯದಲ್ಲಿ ದಯವಿಲ್ಲದಿರುವವನ | ಕಾಯ್ವ ಶಿವನು ಸರ್ವಜ್ಞ ||
--------------
ಸರ್ವಜ್ಞ
ಆವಾವ ಜೀವವನು | ಹೇವವಿಲ್ಲದೆ ಕೊಂದು | ಸಾವಾಗ ಶಿವನ ನೆನೆಯುವಡೆ | ಅವ ಬಂದು | ಕಾವನೇ ಹೇಳು ಸರ್ವಜ್ಞ ||
--------------
ಸರ್ವಜ್ಞ
ಆಶೆಯತಿ ಕೇಡೆಂದು | ಹೇಸಿ ನಾಚುತಲಿಕ್ಕು | ಆಶೆಯನು ಬಿಡದೆ - ಅಭಿಮಾನಕ್ಕೋರಿದರೆ | ಘಾಸಿಯಾಗಿಕ್ಕು ಸರ್ವಜ್ಞ ||
--------------
ಸರ್ವಜ್ಞ
ಆಶೆಯಿಲ್ಲನ ದೋಸೆ | ಮೀಸೆ ಇಲ್ಲದ ಮೋರೆ | ಬಾಸಿಂಗ ಹರಿದ ಮದುವೆಯು ಇವು ಮೂರೂ ಹೇಸಿ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ