ಒಟ್ಟು 233 ಕಡೆಗಳಲ್ಲಿ , 1 ವಚನಕಾರರು , 183 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರುಕಣ್ಣೀಶ್ವರನ | ತೋರಿಕೊಡಬಲ್ಲ ಗುರು ಬೇರರಿವುದೊಂದು ತೆರನಿಲ್ಲ - ಗುರುಕರಣ ತೋರಿಸುಗು ಶಿವನ ಸರ್ವಜ್ಞ
--------------
ಸರ್ವಜ್ಞ
ಮೆಚ್ಚದಿರು ಪರಸತಿಯ | ರಚ್ಚೆಯೊಳು ಬೆರೆಯದಿರು | ನಿಚ್ಚ ನೆರೆಯೊಳಗೆ ಕಾದದಿರು ಒಬ್ಬರಾ | ಇಚ್ಚೆಯಲಿರದಿರು ಸರ್ವಜ್ಞ ||
--------------
ಸರ್ವಜ್ಞ
ಮೆಚ್ಚಿಸುವದೊಲಿದವರ | ಇಚ್ಛೆಯನೆ ನುಡಿಯುವದು ತುಚ್ಛದಿಂದಾರ ನುಡಿದಿಹರೆ ಅವನಿರವು | ಬಿಚ್ಚುವಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಮೇರುವಿಂಗೆಣೆಯಿಲ್ಲ | ಧಾರುಣಿಕೆ ಸರಿಯಿಲ್ಲ | ತಾರಕೆನಿಗಿಂತ ಹಿತರಿಲ್ಲ ದೈವತಾ | ಬೇರೊಬ್ಬನಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಮೊಲೆಗಳುಗಿದವಳಾಗಿ | ಚಲುವೆ ಒಲಿದವಳಾಗಿ | ಹಲತೆರದಿ ಕರೆವ ಕಾಮಿನಿಯ ನೆರೆ ಬಿಟ್ಟು ತೊಲಗುವರಾರು ಸರ್ವಜ್ಞ ||
--------------
ಸರ್ವಜ್ಞ
ಯೋನಿಜರು ಯೋಗಿಯನು | ಹೀನವೆನ್ನುವದೇನು ? | ಅನಂದ ತಾಣದೊಳಗಿರಲು ಯೋಗಿಯಾ | ಮಾನ ಘನವಹುದು ಸರ್ವಜ್ನ್ಯ ||
--------------
ಸರ್ವಜ್ಞ
ರಾಗ ಯೋಗಿಗೆ ಹೊಲ್ಲ | ಭೋಗ ರೋಗಿಗೆ ಹೊಲ್ಲ | ಓಗರವು ಎಣ್ಣೆ - ಉಣಹೊಲ್ಲ ಪರನಿಂದೆ | ಆಗಲುಂ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ರಾಗಿಯನ್ನು ಉಂಬುವ ನಿ | ರೋಗಿ ಎಂದೆನಿಸುವನು | ರಾಗಿಯು ಭೋಗಿಗಳಿಗಲ್ಲ ಬಡವರಿಂ | ಗಾಗಿ ಬೆಳೆದಿಹುದು ಸರ್ವಜ್ಞ ||
--------------
ಸರ್ವಜ್ಞ
ಲಿಂಗದಿಂ ಘನವಿಲ್ಲ | ಗಂಗೆಯಿಂ ಶುಚಿಯಿಲ್ಲ | ಕಂಗಳಿಂದಧಿಕ ಹಿತರಿಲ್ಲ ಭಕ್ತ ತಾ | ಜಂಗಮನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ವನಧಿಯೊಳಡಗಿ ತೆರೆ | ವನಧಿಯೊಳಗೆಸೆವಂತೆ | ಚಿನುಮಯನು ಇಪ್ಪ ನಿಜದೋಳಗೆ ತ್ರೈಜಗತ | ಜನನ ತಾನೆಂದು ಸರ್ವಜ್ಞ ||
--------------
ಸರ್ವಜ್ಞ
ವಿದ್ಯೆಯೇ ತಾಯ್ತಂದೆ | ಬುದ್ಧಿಯೇ ಸೋದರನು | ಆಭ್ವಾನ ಕಾದರವ ನೆಂಟ ಸುಖದಿ ತಾ | ನಿದ್ದುದೇ ರಾಜ್ಯ ಸರ್ವಜ್ಞ ||
--------------
ಸರ್ವಜ್ಞ
ವಿಪ್ರರಿಂದಲೇ ವಿದ್ಯೆ | ವಿಪ್ರರಿಂದಲೇ ಬುದ್ಧಿ | ವಿಪ್ರ ನಿಜವಿಪ್ರರಿಲ್ಲದಿರಲೇ ಜಗವು ಕ್ಷಿಪ್ರದಲಿ ಕೆಡಗು ಸರ್ವಜ್ಞ ||
--------------
ಸರ್ವಜ್ಞ
ವಿಷಯದಾ ಬೇರನ್ನು | ಬಿಸಿಮಾಡಿ ಕುಡಿದಾತ ಪಶು ಪತಿಯು ಅಕ್ಕ ಶಶಿಯಕ್ಕು ಮೈಯ್ಬಣ್ಣ ಮಿಸಿನಿಯಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಶೇಷನಿಂ ಬಲರಿಲ್ಲ | ಮೋಸದಿಂ ಕಳರೆಲ್ಲ ನೇಸರೆಂ ಜಗಕೆ ಹಿತರಿಲ್ಲ - ದೇವ ತಾ ಈಶನಿಂದಿಲ್ಲ ಸರ್ವಜ್ಞ
--------------
ಸರ್ವಜ್ಞ
ಶೇಷಿನಿಂ ಬಲರಿಲ್ಲ | ಮೋಸದಿಂ | ನೇಸರಿಂ ಜಗಕ ಹಿತರಿಲ್ಲ | ಪರದೈವ | ಈಶನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ